‘ಬೆಳುದಿಂಗಳ ನೋಡs..' ಎಚ್.ಎಸ್. ಸತ್ಯನಾರಾಯಣ ಅವರ ಬೇಂದ್ರೆಯವರ ಬದುಕು ಮತ್ತು ಅವರ ಪದ್ಯಗಳ ಜತೆಗೊಂದು ಪಯಣವನ್ನು ಒಳಗೊಂಡ ಕೃತಿಯಾಗಿದೆ. ಬೇಂದ್ರೆ ಎಂಬ ಹೆಸರು ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದ ದೊಡ್ಡ ಬೆರಗು. ಶಬ್ದ, ನಾದ, ಲಯ, ಛಂದ ಎಂಬ ನಾಲ್ಕು ತಂತ್ರ ಚತುರ್ಮುಖತೆಯಿಂದ ಕನ್ನಡ ಕಾವ್ಯವಾಹಿನಿಗೆ ಬೆಲೆಯುಳ್ಳ ಚಿರಕಾವ್ಯವನ್ನು ಕೊಟ್ಟ ಧೀಮಂತ ಕವಿ. ಇವರ ಕಾವ್ಯವನ್ನು ಓದಿ ನಾಡು ತಣಿದಿದೆ. ಕವಿಯ ಕಾವ್ಯ ವ್ಯಕ್ತಿತ್ವದ ಆಯಾಮ ಒಂದು ಮಜಲಾದರೆ, ಆತನ ಸಾಮಾಜಿಕ ವ್ಯಕ್ತಿತ್ವ ಮತ್ತೊಂದು ಮಜಲು. ವಿದ್ವತ್ತಿನ ಗತ್ತು, ಕಾವ್ಯಪ್ರತಿಭೆಯ ಮೇಲರಿಮೆ, ಸಿಟ್ಟು, ಸೆಡವು, ಜಗಳಗಂಟಿತನ, ವಾಗ್ವಿಲಾಸದ ವೈಖರಿ, ಬಹುಶ್ರುತ ಆಸಕ್ತಿ, ಅಪಾರವಾದ ಜ್ಞಾನಾಕಾಂಕ್ಷೆ, ಜಗದೆಲ್ಲ ಚಟುವಟಿಕೆಗಳನ್ನು ಕಾವ್ಯ ಪರಿಪ್ರೇಕ್ಷ್ಯದಲ್ಲಿ ಕಾಣುವ, ಕಾಣಿಸುವ ಬಗೆ, ಮಗು ಸಹಜ ಮುಗ್ಧತೆ ಈ ಎಲ್ಲ ಗುಣಗಳ ಸಮ್ಮಿಲನದ ಗಾರುಡಿಗ ವ್ಯಕ್ತಿತ್ವ ಬೇಂದ್ರೆಯವರದು. ಇವರ ಬಗೆಗೆ ಪ್ರಚಲಿತದಲ್ಲಿರುವ ಕತೆಗಳನ್ನು, ಸಂಗತಿಗಳನ್ನು, ಪ್ರಸಂಗಗಳನ್ನು ಒಂದೆಡೆ ಸಂಗ್ರಹಿಸಿ ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಒದಗಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ಕಾರಣದಿಂದ ಎಚ್.ಎಸ್. ಸತ್ಯನಾರಾಯಣ ಅವರ 'ಅಂಬಿಕಾತನಯದತ್ತನ ಹಾಡ ಬೆಳುದಿಂಗಳು ನೋಡಾ...' ಎಂಬ ಕೃತಿ ಮಹತ್ವದ್ದು.
ಕನ್ನಡ ಪ್ರಾಧ್ಯಾಪಕರು ಹಾಗೂ ಹೊಸ ತಲೆಮಾರಿನ ವಿಮರ್ಶಕರೂ ಆದ ಎಚ್.ಎಸ್. ಸತ್ಯನಾರಾಯಣ ಅವರು ಮೂಲತಃ ಮಲೆನಾಡಿನವರು. ಕುವೆಂಪು ಅವರ ಕುಪ್ಪಳಿಗೆ ಸಮೀಪವೇ ಇರುವ, ಚಿಕ್ಕಮಗಳೂರಿನ ಹೊಕ್ಕಳಿಕೆಯಲ್ಲಿ ಜನಿಸಿದ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿತರು. ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಸತ್ಯನಾರಾಯಣ ಅವರು ಅನೇಕ ಸಾಹಿತಿಗಳೊಂದಿಗೆ ಒಡನಾಡಿದ್ದಾರೆ. ಆ ಬಗ್ಗೆ ಅತ್ಯಂತ ಆಕರ್ಷಕವಾಗಿ ಮಾತನಾಡುವ ಅವರು ಅಷ್ಟೇ ಆಕರ್ಷಕವಾಗಿ ಬರೆಯುತ್ತಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ‘ಕನ್ನಡ ಸಾಹಿತ್ಯ ಸಂಗಾತಿ’, ‘ಸಾಹಿತ್ಯ ವಿಮರ್ಶೆ-2016’, ಜೊತೆಗೆ ಡುಂಡಿರಾಜರ ಸಾಹಿತ್ಯ ವಿಮರ್ಶೆ ಕುರಿತ ‘ಡುಂಡಿಮಲ್ಲಿಗೆ’, ದ್ವಿತೀಯ ಪಿ.ಯು.ಸಿ.ಯ ಕನ್ನಡ ಭಾಷಾ ಪಠ್ಯ ‘ಸಾಹಿತ್ಯ ...
READ MORE