ಲೇಖಕ ಸಂತೋಷ ಚೊಕ್ಕಾಡಿ ಅವರ ಭಾವಗೀತೆಗಳ ಸಂಕಲನ ನಮಗಿಲ್ಲ ಹಕ್ಕಿಹಾಡು. ಈ ಕೃತಿಯಲ್ಲಿ ಎಚ್. ದುಂಡಿರಾವ್ ಅವರ ಬೆನ್ನುಡಿಯ ಮಾತುಗಳಿವೆ. ಅವರು ಹೇಳುವಂತೆ, ಈ ಕೃತಿಯ ಮೂಲಕ ಲೇಖಕ ಅನೇಕ ಸೊಗಸಾದ ಹಾಡುಗಳನ್ನು ಮೊಗೆ ಮೊಗೆದು ನೀಡಿದ್ದಾರೆ. ಇಲ್ಲಿನ ಬಹಳಷ್ಟು ಹಾಡುಗಳಲ್ಲಿ ಗಾಢವಾದ ವಿಷಾದ ಕಲಾತ್ಮಕವಾಗಿ ಮೂಡಿಬಂದಿದೆ. ವರ್ತಮಾನದ ತಲ್ಲಣಗಳು, ಪ್ರೀತಿಯ ಹಂಬಲ, ಸಂಬಂಧಗಳ ಸೆಳೆತದ ಬಗ್ಗೆ ಕವಿಯ ಮನದಲ್ಲಿ ಹೊಮ್ಮಿದ ಭಾವ ಅಕ್ಷರಗಳಲ್ಲಿ ಸಹಜವಾಗಿ ಹನಿಗೂಡಿ ಹಾಡಿನ ಹೊಳೆಯಾಗಿ ಹರಿದಿದೆ ಎಂಬುದಾಗಿ ಹೇಳಿದ್ದಾರೆ.
ಲೇಖಕ ಡಾ. ಸಂತೋಷ ಚೊಕ್ಕಾಡಿ ಮೂಲತಃ ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಚೊಕ್ಕಾಡಿಯವರು. ಕೃತಿಗಳು: ಪ್ರಾತಃ ಕಾಲದ ಪದ್ಯಗಳು (ಕವನ ಸಂಕಲನ), ದಕ್ಷಿಣ ಕನ್ನಡ ಕಾವ್ಯದ ವಿಭಿನ್ನ ನೆಲೆಗಳು ...
READ MORE