ತ್ಯಾಗಜೀವಿ

Author : ಪದ್ಮಾಕರ ಅಶೋಕಕುಮಾರ ಮಟ್ಟಿ

Pages 102

₹ 100.00




Year of Publication: 2021
Published by: ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ
Address: ಡೊಂಗರಗಾಂವ್, ಕಮಲಾಪುರ ತಾಲೂಕು, ಕಲಬುರಗಿ ಜಿಲ್ಲೆ

Synopsys

ಡಾ. ಪದ್ಮಾಕರ ಅಶೋಕ ಕುಮಾರ್ ಮಟ್ಟಿ ಅವರು ರಚಿಸಿದ ಕವನ ಸಂಕಲನ-ತ್ಯಾಗಮಯಿ. ವ್ಯಕ್ತಿ, ಪ್ರಕೃತಿ, ಸಾಮಾಜಿಕ ರೀತಿನೀತಿಗಳು, ದಲಿತ ಬದುಕಿನ ನೋವುಗಳು, ಅಧ್ಯಾತ್ಮಕತೆಯ ವಿಶ್ಲೇಷಣೆ ಇಲ್ಲಿಯ ಕವಿತೆಗಳ ವಸ್ತು. ಕವಿತೆಗಳು ಸಮಕಾಲೀನ ಸಂಗತಿಗಳಿಗೆ ಕನ್ನಡಿ ಹಿಡಿಯುವ ಹಾಗೂ ಸಾಂಪ್ರದಾಯಿಕ ಸಮಾಜವನ್ನು ಅರಿವಿನಿಂದ ಮೇಲೆತ್ತುವ ಮತ್ತು ರಸಾನುಭವದ ಅನುಭೂತಿಯೊಂದಿಗೆ ಧ್ವನಿ ಪೂರ್ಣವಾಗುತ್ತವೆ. ಸಮಾಜದ ಮತ್ತು ಸರಿದಾರಿಗೆ ತರುವ ಸಂದೇಶಗಳು, ಜೀವನ ಪ್ರೀತಿ, ಬದುಕಿನ ಸಾರ್ಥಕತೆಯತ್ತ ಗಮನ ಸೆಳೆಯುತ್ತವೆ.

About the Author

ಪದ್ಮಾಕರ ಅಶೋಕಕುಮಾರ ಮಟ್ಟಿ

ಲೇಖಕ ಡಾ. ಪದ್ಮಾಕರ ಅಶೋಕಕುಮಾರ ಮಟ್ಟಿ ಅವರು ಬೀದರ ಜಿಲ್ಲೆಯ ಮೀನಕೇರಿ ಗ್ರಾಮದವರು. ತಂದೆ ಶಿವರಾಜ ಮಟ್ಟಿ, ತಾಯಿ ಗಂಗಮ್ಮ ಮಟ್ಟಿ, ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಬೀದರಿನ ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ, ಹುಮನಾಬಾದಿನಲ್ಲಿ ಬಿಎ ಪದವಿ ಹಾಗೂ ಗುಲಬರ್ಗಾ ವಿ.ವಿ.ಯಿಂದ ಎಂ.ಎ  ಪಡೆದರು. ಯಶವಂತ ಚಿತ್ತಾಲರ ಕಥೆಯಾದಳು ಹುಡುಗಿ ಕಥಾಸಂಕಲನದ ಮೇಲೆ ಎಂ.ಫಿಲ್ ಹಾಗೂ ವಚನಕಾರ ಉರಿಲಿಂಗ ಪೆದ್ದಿ ವಿಷಯವಾಗಿ ಪಿಎಚ್ ಡಿ ಪಡೆದಿದ್ದಾರೆ.  ಸಿರಿಗನ್ನಡ ವೇದಿಕೆಯ ಯಾದಗಿರಿ ಜಿಲ್ಲಾ ಅಧ್ಯಕ್ಷರಾಗಿದ್ದಾರೆ.  ಕೃತಿಗಳು: ತ್ಯಾಗಜೀವಿ, ಕರುಳಬಳ್ಳಿ (ಕವನ ಸಂಕಲನಗಳು) ಜನಪದ ಸಾಹಿತ್ಯ, (ಗುಲಬರ್ಗಾ ವಿ.ವಿ. ಪದವಿ ತರಗತಿಗೆ ಪಠ್ಯವಾಗಿದೆ). ಇವರು ಬರೆದ ಲೇಖನಗಳು, ...

READ MORE

Related Books