ಅಪ್ಪನ ಅಂಗಿ

Author : ಲಕ್ಷ್ಮಣ ವಿ.ಎ

Pages 80

₹ 100.00




Year of Publication: 2019
Published by: ಬಹುರೂಪಿ
Address: ಎಂಬೆಸ್ಸೆ ಸೆಂಟರ್‌, ಮೊದಲ ಮಹಡಿ, ಕ್ರೆಸೆಂಟ್‌ ರಸ್ತೆ, ಕುಮಾರಪಾರ್ಕ್‌ ಪಶ್ಚಿಮ, ಬೆಂಗಳೂರು
Phone: 7019182729

Synopsys

ಅಪ್ಪನ ಅಂಗಿ ಕವನ ಸಂಕಲನದಲ್ಲಿ ವಿ.ಎ. ಲಕ್ಷ್ಮಣ ಅವರ ಕವಿತೆಗಳು, ನೆಮ್ಮದಿಯ ಪಯಣದ ಅರಿವೆಂಬುದು ನಮ್ಮ ಹೊರಗಿಲ್ಲದೇ ಆ ಅರಿವು ನಮ್ಮೊಳಗೇ ಇರುವ ಮರ್ಮವನ್ನು ಚಿತ್ರವತ್ತಾಗಿ ಹೇಳುತ್ತವೆ.

ಕವಿ ಅನುಭವಿಸಿದ ವೇದನೆಗಳೇ ಹಾಡಾಗಿ ಹರಿಯುತ್ತಾ, ನಮ್ಮೊಂದಿಗೇ ನಡೆದು ಬರುವ ನೆರಳೂ ಕೂಡ ನಮ್ಮದಷ್ಟೆ ಅಲ್ಲ ಎಂಬ ತಿಳಿವಳಿಕೆಯೊಂದನ್ನು ಕಟ್ಟಿ ಕೊಡುತ್ತದೆ. ಅವ್ವನ ಸ್ವಂತದ ಬಿಕ್ಕು, ಅಪ್ಪನ ಅಂಗಿಯ ಮೈತುಂಬ ಅವ್ವ ಹಾಕಿದ ತೇಪೆ, ವೃದ್ಧಾಶ್ರಮದ ತಾಯಿಯೊಬ್ಬಳು ಮನೆಯ ದಾರಿ ತುಳಿಯುವಂತಾಗಲು ಇನ್ನೂ ತೆರೆಯಬೇಕಿರುವ ಜೈಲಿನ ದೊಡ್ಡ ಬಾಗಿಲು, ಅವ್ವನ ಏಕಾಂಗಿ ಫೋಟೊ ಹುಡುಕುವ ಅನಿವಾರ್ಯತೆ ತಂದೊಡ್ಡಿದ ಅವಳ ತಿಥಿ ಕಾರ್ಡು... ಹೀಗೆ ಲಕ್ಷಣ ಅವರ ಕವಿತೆಗಳು ಓದುಗನ ಮನ ತಲುಪುತ್ತವೆ. ಮುನ್ನುಡಿಯಲ್ಲಿ ಸುನಂದಾ ಕಡಮೆ ಅವರು ಬರೆಯುತ್ತಾ , ‘ಎಲೆ ಕಳಚುವ ಸದ್ದನ್ನೂ ಸಹ ಹಿಡಿಯುವ ಸೂಕ್ಷತೆಯಲ್ಲಿ ಹುಟ್ಟಿದ ಇಲ್ಲಿಯ ಕವಿತೆಗಳು ಬದುಕನ್ನು ಒಟ್ಟಿಗೇ ಪಾತಾಳ ಗರಡಿಯಂತೆ ಶೋಧಿಸಬಲ್ಲವು. ಇಂಥ ಶೋಧನೆಗಳು ಕೇವಲ ವಿಸ್ಮಯಗಳಲ್ಲಿ ಹೂತು ಹೋಗುವಂತೆ ಕವಿ ಲಕ್ಷ್ಮಣ ಬರೆಯುವವರಲ್ಲ. ಕವಿತೆಗಳ ದಿಕ್ಕಿನಲ್ಲಿರುವುದು ಕವಿಯ ಅನುಭವದಾಳದ ಅಖಂಡ ಆತ್ಮಾನುಸಂಧಾನ. ಈ ಆತ್ಮಾನುಸಂಧಾನವೇ ಇಲ್ಲಿಯ ಕವಿತೆಗಳ ಘನತೆಯನ್ನು ಆವರಿಸಿದೆ’ ಎಂದಿದ್ದಾರೆ. 

About the Author

ಲಕ್ಷ್ಮಣ ವಿ.ಎ

ಡಾ. ಲಕ್ಷ್ಮಣ ವಿ.ಎ ಮೂಲತಃ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮದವರು. ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. ಓದು, ಬರಹವನ್ನು ಹವ್ಯಾಸವಾಗಿಸಿಕೊಂಡಿರುವ ಲಕ್ಷ್ಮಣ್ ಅವರು ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ ಎಂಬ ಕವನ ಸಂಕಲವನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಖಾಸಗೀ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಅಪ್ಪನ ಅಂಗಿ’ ಅವರ ಇತ್ತಿಚಿನ ಕೃತಿ. ...

READ MORE

Related Books