ತೇಜಸ್ವಿಯವರ ಏಕೈಕ ಕವನ ಸಂಕಲನ ‘ಬೃಹನ್ನಳೆ ಸೋಮುವಿನ ಸ್ವಗತ ಲಹರಿ’. ಇದು 1962ರಲ್ಲಿ ಪ್ರಕಟವಾಯಿತು. ರಾಜಕೀಯ ವಿಡಂಬನೆ, ಹತಾಶೆ, ಅಸಹಾಯಕತೆ, ಸಿಟ್ಟು ಅಪ್ರಕಟಿತ ಪ್ರೇಮ ಈ ಸಂಕಲನದ ವಸ್ತುಗಳು. ಇದು ಒಂದು ರೀತಿಯಲ್ಲಿ ’ಬೃಹನ್ನಳೆ ಸೋಮುವಿನ ಸ್ವಗತ ಲಹರಿ'ಯಾಗಿದೆ. ನವ್ಯ ಸಾಹಿತ್ಯದ ಔನ್ನತ್ಯದ ಕಾಲದಲ್ಲಿ ರಚಿತಗೊಂಡು ಅದರಿಂದ ಪ್ರಭಾವಿತಗೊಂಡಿವೆ. ಆದರೂ ಇಲ್ಲಿನ ಕವಿತೆಗಳಲ್ಲಿ ನವ್ಯ ಮನೋಧರ್ಮದ ಬಗೆಗಿನ ತಿರಸ್ಕಾರ, ವ್ಯಂಗ್ಯಗಳು ಸಾಕಷ್ಟು ಪ್ರಮಾಣದಲ್ಲಿವೆ.
ಕನ್ನಡದ ಹೆಸರಾಂತ ಲೇಖಕ ಕುವೆಂಪು ಅವರ ಪುತ್ರರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರು 08-09-1938ರದು ಜನಿಸಿದರು. ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ’ಚಿದಂಬರ ರಹಸ್ಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೇಜಸ್ವಿ ಅವರು ಕನ್ನಡದಲ್ಲಿ ನವ್ಯ ಸಾಹಿತ್ಯ ಚಳುವಳಿಯು ಉಚ್ಛ್ರಾಯ ಸ್ಥಿತಿಯಲ್ಲಿದ್ದ ದಿನಗಳಲ್ಲಿ ಅದಕ್ಕಿಂತ ಭಿನ್ನವಾದ ನೆಲೆಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ನವ್ಯ ಲೇಖಕರು ನಗರ ಕೇಂದ್ರಿತ, ವ್ಯಕ್ತಿನಿಷ್ಟ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬದುಕು ಕುರಿತ ಮತ್ತು ಅದು ಹಳಹಳಿಕೆಯ ಧ್ವನಿಯಲ್ಲಿ ಇರದ ಹಾಗೆ ನೋಡಿಕೊಂಡರು. ಲೋಹಿಯಾ ಚಿಂತನೆಗಳಿಂದ ಪ್ರೇರಿತರಾಗಿದ್ದ ...
READ MORE