ಶ್ರಾವಣದ ಪೋರಿ ಒಂದು ಸುಂದರ ಕಾವ್ಯಗಳ ಗುಚ್ಛ. ಸ್ವತಂತ್ರ ಕವನಗಳ ಜೊತೆ ಅನುವಾದಿತ ಕವಿತೆಗಳೂ ಇದರಲ್ಲಿವೆ. ಪುಟ್ಟ ಪುಟ್ಟ ಮುಕ್ತಕಗಳೂ ಇವೆ. ಅದರಲ್ಲೊಂದು ಕವನವನ್ನು ಇಲ್ಲಿ ಉಲ್ಲೇಖಿಸುತ್ತಾರೆ. ಬದುಕಿನ ಆಟವನ್ನು ಹೇಗೆ ಆಡಬೇಕು? ಅನ್ನೋದನ್ನ ಜಾನಪದ ಶೈಲಿಯಲ್ಲಿ ಹೇಳುವ ಕವನವಿದು. ಎಂತಹಾ ವಿಚಿತ್ರವಲ್ಲವೇ? ಬಿರುಕು ಬಾಹ್ಯ ಜಗತ್ತಿನ ಭವನವನ್ನು ಕೆಡವುತ್ತದೆ, ಅದೇ ಬಿರುಕು ಆಂತರಿಕ ಜಗದ 'ಭವನ' ಕಟ್ಟುತ್ತದೆ! ಬಾಹ್ಯದಲ್ಲೂ ಆಂತರ್ಯದಲ್ಲೂ ಬಿರುಕೊಂದು ಹಾನಿಯನ್ನೇ ಮಾಡುತ್ತದೆ. ಮನರಂಜಿಸುವ ಕಾವ್ಯ ಶೈಲಿಯೊಂದಿಗೆ ಆತ್ಮವನ್ನು ತಟ್ಟುವ, ತಟ್ಟಿ ಎಚ್ಚರಿಸುವ ಕವನಗಳ ಗುಚ್ಛವೇ ಶ್ರಾವಣದ ಪೋರಿ.
ಯಲ್ಲಾಪುರ ಶ್ರೀರಂಗ ಕಟ್ಟಿಯವರು ಅಪರೂಪದ ಲೇಖಕರು, ವಿಶ್ರಾಂತ ಪ್ರಾಧ್ಯಾಪಕರು. ಕೃತಿ: ಬದುಕ ಪಯಣದ ಬುತ್ತಿ ...
READ MORE