ಕವಿ ಸಚಿನ್ ಒಡೆಯರ್ ಅವರ ಮೊದಲ ಕವನ ಸಂಕಲನ-ಭಾವ ಭಂಡಾರ. ಒಟ್ಟು 62 ಕವನಗಳಿವೆ. ನಾಡು-ನುಡಿ-ಹೆಣ್ಣು-ಪ್ರಕೃತಿ ಹೀಗೆ ವಸ್ತು ವೈವಿಧ್ಯತೆ ಹೊಂದಿರುವ ಕವಿತೆಗಳು ಇಲ್ಲಿವೆ. ಪ್ರಾಸಬದ್ಧ ಕವಿತೆಗಳೂ ಇವೆ. ಸಾಹಿತಿ ಆರ್. ಎಲ್. ಪೊಲೀಸ್ ಪಾಟೀಲ್ ಮುನ್ನುಡಿ ಬರೆದು ‘ಸಾಮಾಜಿಕ ಸಮಸ್ಯೆ ಹಾಗೂ ಮೌಲ್ಯಯುತ ಬದುಕಿನ ಚಿಂತನೆಗಳು ಕಾವ್ಯದ ಪ್ರಮುಖ ಅಂಶಗಳಾಗಿವೆ. ಇವರ ಚೊಚ್ಚಲ ಕೃತಿಯಾದರೂ ವಿಷಯದ ಆಯ್ಕೆಯಲ್ಲಿ ತಮ್ಮ ವಿಶೃಷತೆ ತೋರಿರುವ ಕವಿಯು ಭವಿಷ್ಯದಲ್ಲಿ ಉತ್ತಮ ಸಾಹಿತ್ಯ ಕೊಡುಗೆಯ ಭರವಸೆ ನೀಡುತ್ತಾರೆ’ ಎಂದು ಪ್ರಶಂಸಿಸಿದ್ದಾರೆ. ಕೃತಿಗೆ ಬೆನ್ನುಡಿ ಬರೆದಿರುವ ಸಾಹಿತಿ ಭಾಗ್ಯಲಕ್ಷ್ಮಿ ಇನಾಮತಿ ‘ಸುತ್ತಮುತ್ತಲಿನ ವಿದ್ಯಮಾನಗಳನ್ನು ಭಾವನಾತ್ಮಕವಾಗಿ ಸ್ವೀಕರಿಸಿ ಕವಿ ಸಚಿನ್ ಅವರು ಕಾವ್ಯ ರೂಪಕ್ಕೆ ಇಳಿಸುತ್ತಾರೆ’ ಎಂದು ಶ್ಲಾಘಿಸಿದ್ದಾರೆ.
ಸಚಿನ್ ಒಡೆಯರ್ ಅವರು ಮೂಲತಃ ವಿಜಯಪುರ ಜಿಲ್ಲೆ ಹಾಗೂ ತಾಲೂಕಿನ ಕಂಬಾಗಿ (ಜನನ: 10-07-1992) ಗ್ರಾಮದವರು. ಬಿ.ಎಸ್.ಸಿ. ಪದವೀಧರರು. ಮುಂಡರಗಿಯ ವಿಜಯನಗರ ಸಕ್ಕರೆ ಕಾರ್ಖಾನೆಯಲ್ಲಿ ಪ್ರಯೋಗಾಲಯದ ತಾಂತ್ರಿಕ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಲೆ-ರಂಗಭೂಮಿಯಲ್ಲಿ ಆಸಕ್ತಿ ಇದೆ. ಭಾವ ಭಂಡಾರ-ಇವರ ಮೊದಲ ಕವನ ಸಂಕಲನ. ...
READ MORE