ಪರಮಾನಂದ ಎಸ್. ಸರಸಂಬಿ ಅವರ ಪ್ರಥಮ ಕವನ ಸಂಕಲನ-ಚಿಗುರೆಲೆ. 58 ಕವನಗಳಿವೆ. ಸಾಮಾಜಿಕ ಚಿಂತನೆ ಪ್ರೇರೇಪಿಸುವ ಹಾಗೂ ಹೊಣೆಗಾರಿಕೆಯನ್ನು ಹೆಚ್ಚಿಸುವ, ಸಾಮೂಹಿಕ ವರ್ತನೆಯನ್ನು ವಿಮರ್ಶಿಸುವ, ಮಾನವೀಯತೆಯನ್ನು ಆಶಿಸುವ ಹೀಗೆ ವಿವಿಧ ವಸ್ತು ವೈವಿಧ್ಯತೆಗಳನ್ನು ಒಳಗೊಂಡಿವೆ.
ಬೆಳಕಿಲ್ಲದ ಯುಗಾದಿ ಕವಿತೆಯಲ್ಲಿ ’ಬೆಳಕಿಲ್ಲ, ಹೊಳಪಿಲ್ಲ, ಬಂದು ಹೋಯಿತು ಯುಗಾದಿ’ ಎನ್ನುವುದರ ಮೂಲಕ ಬಹುಜನರಿಗೆ ಯುಗಾದಿಯಂತಹ ದೊಡ್ಡ ಹಬ್ಬವೂ ಅವರ ಮನದಲ್ಲಿ ಹೊಸತನವನ್ನು ತುಂಬದೇ ಹೋಗುವುದಾದರೆ ಅವರ ಬಡತನದ ತೀವ್ರತೆಯನ್ನು ಅತ್ಕಂತ ಪರಿಣಾಮಕಾರಿಯಾಗಿ ಧ್ವನಿಸುತ್ತದೆ. ಕೆಲವು ಮಹನೀಯರ ವ್ಯಕ್ತಿ ಪ್ರಶಂಸೆಯ ಕವಿತೆಗಳೂ ಇವೆ.
‘ಜಾಗೃತರಾಗಿ ಜಾಣತನದಿ ಧರೆಯ ಪೊರೆಯದಿರೆ ಪ್ರಪಾತದಿ ಸಮಾಧಿ ನಿಶ್ಚಿತ’ ಎಂದೂ ಎಚ್ಚರಿಸುವ ಪರಿಸರ ಪ್ರೀತಿಯ ಕವನಗಳೂ ಇವೆ. ಸಾಹಿತಿ ಗಿರೀಶ ಜಕಾಪುರೆ ಮೈಂದರ್ಗಿ ಕೃತಿಯ ಮುನ್ನುಡಿಯಲ್ಲಿ ‘ಕವಿಯಲ್ಲಿ ಭಾವನೆಗಳ ಸುನಾಮಿ ಇದೆ. ಓದುಗರು ಈ ಪ್ರವಾಹದ ರಭಸವನ್ನು ಭಾವನಾತ್ಮಕವಾಗಿ ಗ್ರಹಿಸಬೇಕಾದರೆ ಓಘದಲ್ಲಿ ಒಂದಿಷ್ಟು ಅಂತರ ನೀಡಿ ಮನನಕ್ಕೆ ಅವಕಾಶ ಒದಗಿಸುವತ್ತ ಗಮನ ನೀಡಬೇಕು ’ ಎಂದು ಸಲಹೆ ನೀಡಿದ್ದಾರೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ರೇವೂರು ಗ್ರಾಮದ ಪರಮಾನಂದ ಎಸ್. ಸರಸಂಬಿ ಅವರು ಕಕ್ಕರಸಾವಳಿಗಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ (ಪ್ರಭಾರ) ಮುಖ್ಯಗುರುಗಳು. ಡಿಎಡ್, ಬಿಎಡ್, ಎಂ.ಎ. ಪದವೀಧರರು. ಚಿಗುರೆಲೆ-ಇವರ ಪ್ರಥಮ ಕವನ ಸಂಕಲನ. ಕೆಕ್ಕರಸಾವಳಗಿಯ ಶಾಲಾ ಮಕ್ಕಳಿಂದ ಕಥೆಗಳನ್ನು ಬರೆಯಿಸಿ ಇವರು ಸಂಪಾದಿಸಿದ ಕೃತಿ-ಹಕ್ಕಿ ಹಿಂಡು, 2017ರಲ್ಲಿ ಬಾಲ ವಿಕಾಸ ಅಕಾಡೆಮಿ ಧನಸಹಾಯದಿಂದ ಪ್ರಕಟಗೊಂಡಿದೆ. ಶಾಲೆ ಆವರಣದಲ್ಲಿ ಹಸಿರು ಉಳಿಸಲು ಹಲವು ಕಾರ್ಯಕ್ರಮಗಳು, ಜೊತೆಗೆ, ಸೇವಾದಳ ಹಾಗೂ ಸ್ಕೌಟ್ಸ್ ತರಬೇತಿಯೊಂದಿಗೆ ಸೇವೆ ನಿರ್ವಹಣೆ, ಕನ್ನಡ ಸಾಹಿತ್ಯ ಪರಿಷತ್ತು ಚವಡಾಪುರ ಘಟಕ ಗೌರವ ಕಾರ್ಯದರ್ಶಿ, ತಾಲೂಕು ಮಟ್ಟದ ಉತ್ತಮ ಶಿಕ್ಷಕ ...
READ MORE