ಈ ಕಥನಕವನದ ‘ಹುಳು’ಬಾಣಭಟ್ಟನ ಕಾದಂಬರಿಯ ಗಿಳಿಯ ಹಾಗೆ ಸೊಗಸಾಗಿ ಕತೆಯನ್ನು ನಿರೂಪಿಸುತ್ತದೆ. ಈ ಕಥೆಯಲ್ಲಿ ಮುಗ್ಧತೆ ಮತ್ತು ವಾಸ್ತವದ ನಿರಂತರ ಒಡನಾಟ ಮತ್ತು ಸಂಘರ್ಷದ ಚಿತ್ರಣವಿದೆ. ಕನ್ನಡದಲ್ಲಿ ಕಥನಕಾವ್ಯದ ಕಥೆ ಮುಗಿಯಿತು ಎನ್ನುವಾಗ ಆ ಬಗೆಯ ರಚನೆಗಳನ್ನು ಮಾಡಿ ಸಹೃದಯದ ಗಮನ ಸೆಳೆದ ಕವಿ ಗ.ಸು. ಭಟ್ಟ ಬೆತ್ತಗೇರಿ. ಯಕಶ್ಚಿತ್ ಹುಳದ ಕಥೆ ಕೃತಿ ಓದುಗನಿಗೆ ಇಷ್ಟವಾಗುವಂತ ಕಥನಕವನವಾಗಿದೆ.