ಒಳದಾರಿಯ ಬೆಳದಿಂಗಳು

Author : ಕೆ. ರಮಾನಂದ ಬನಾರಿ

Pages 53

₹ 100.00




Year of Publication: 2020
Published by: ಗೋಪಾಲಕೃಷ್ಣ ಪ್ರಕಾಶನ, ಕಾಸರಗೋಡು.

Synopsys

ಕವಿ ಕೆ. ರಮಾನಂದ ಬನಾರಿ ಅವರ ಕವನ ಸಂಕಲನ ಒಳದಾರಿಯ ಬೆಳದಿಂಗಳು. ಇಲ್ಲಿ ಒಟ್ಟು 80 ಕವನಗಳಿವೆ. ಸಾಮಾನ್ಯವಾಗಿ ಕೃಷಿ ಜೀವನವನ್ನು ಅವಲಂಭಿಸಿರುವವರಿಗೆ "ಗೋವು " ಎಂದರೆ ಒಂದು ಅವಿಭಾಜ್ಯ ಅಂಗವಿದ್ದಂತೆ. ಅವರ ಗೋವಿನ ಆಗಲುವಿಕೆಯ ದುಃಖವನ್ನು ಅವರು ’ನಮ್ಮನ್ನು ಅಗಲಿದ ಗೋವಿಗೆ’ ಎಂಬ ಕವನದಲ್ಲಿ ತೋಡಿಕೊಂಡಿದ್ದಾರೆ. ವಿಸ್ಮಯ, ಸದ್ದಾಗದ ಸದ್ದುಗಳು, ಶಬರಿ ಕಾಯುತ್ತಾಳೆ, ಕವಿತೆ ಹೇಳಿದ್ದು, ಆಯ್ಕೆ, ಆಯ್ಕೆ, ಪಶ್ಚಿಮದಲ್ಲಿ ಮೂಡುವ ಸೂರ್ಯ, ದರ್ಜಿ, ನಗು ಮತ್ತು ಅಳು ಸೇರಿದಂತೆ ಅನೇಕ ಶೀರ್ಷಿಕೆಗಳ ಕವನಗಳಿವೆ.

About the Author

ಕೆ. ರಮಾನಂದ ಬನಾರಿ
(04 June 1940)

 ಸಾಹಿತಿ ಕೆ.ರಮಾನಂದ ಬನಾರಿ ಅವರು ಜನಿಸಿದ್ದು 1940 ಜೂನ್‌ 4ರಂದು ಕಾಸರಗೋಡಿನ ಕೀರಿಕ್ಕಾಡಿನಲ್ಲಿ ಜನಿಸಿದರು. ಕಲ್ಲಿಕೋಟೆ ವೈದ್ಯಕೀಯ ಮಹಾವಿದ್ಯಾಲಯದಿಂದ ಎಂ.ಬಿ.ಬಿ.ಎಸ್. ಪದವೀಧರರು.  ವೃತ್ತಿಯೊಂದಿಗೆ ಕವನ, ಚುಟುಕ, ಶಿಶುಗೀತೆ, ಪ್ರಬಂಧ ಇತ್ಯಾದಿ ಇವರ ಬರೆಹಗಳು ಕಸ್ತೂರಿ, ಸುಧಾ, ಉದಯವಾಣಿ, ಪ್ರಜಾವಾಣಿ, ಹೊಸದಿಗಂತ, ಯುಗಪುರುಷ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಪ್ರಮುಖ ಕೃತಿಗಳೆಂದರೆ ಎಳೆಯರ ಗೆಳೆಯ, ಕೊಳಲು, ತೊಟ್ಟಿಲು, ಕವಿತೆಗಳೇ ಬನ್ನಿ, ಜೀವವೃಕ್ಷ, ಗುಟುಕುಗಳು, ಬಿಂದುಗಳು, ಸಾಧನೆ. ಯಕ್ಷಗಾನ ಪ್ರಸಂಗಗಳು ಇತ್ಯಾದಿ. ಇವರಿಗೆ ಗೋವಿಂದ ಪೈ ಕಲಾ ಅಕಾಡೆಮಿ ಪ್ರಶಸ್ತಿ, ಗುಲಬರ್ಗಾ ಡಾ. ಎಸ್.ಪಿ. ಶಂಕರ್ ಪ್ರತಿಷ್ಠಾನದ ಶ್ರೇಷ್ಠ ವೈದ್ಯಕೀಯ ಸಾಹಿತ್ಯ ಪ್ರಶಸ್ತಿ, ಸುವರ್ಣ ...

READ MORE

Related Books