ಲೋಕೇಶ ಕಲ್ಕುಣಿ ಅವರ ಕವನಸಂಕಲನ ’ಕಾವೇರಿ’. ವೃತ್ತಿ ಸಹಜ ಒತ್ತಡಗಳ ಮಧ್ಯ ಅವರೊಳಗಿರುವ ಕವಿ ಹೃದಯ ಕಳೆದು ಹೋಗದೆ, ತಾನು ಕಂಡುಂಡ ಪಾಡುಗಳನೆಲ್ಲ ಹಾಡಾಗಿ, ಅವರ ಈ ಕವನ ಸಂಕಲನಕ್ಕೆ ಸಾಕ್ಷಿಯಾಗಿ ಮಿಡಿಯುತ್ತಿವೆ. ಅವರ ರಚನೆಗಳೆಲ್ಲಾ ವಾಸ್ತವವನ್ನು ನಿರೂಪಿಸುತ್ತಲೇ ಜನರನ್ನು ಜಾಗೃತರಾಗಿಸುವ, ಜವಾಬ್ದಾರಿಗಳನ್ನು ಎಚ್ಚರಿಸುವ ಕೆಲಸವನ್ನು ಮಾಡಿವೆ. ಮಾನವ ಮತ್ತು ಪ್ರಕೃತಿಯ ಸಂಬಂಧಗಳು, ರೈತರ ಸಂಕಷ್ಟಗಳು, ಭಾರತಾಂಬೆಗಾಗಿ ಶತ್ರುಗಳಿಗೆ ಎದೆಯೊಡ್ಡಿ ಬಿಸಿ ರಕ್ತ ಚೆಲ್ಲುವ ವೀರಯೋಧರ ದೇಶ ಪ್ರೇಮವನ್ನು ಮೆರೆಸಿ ಯುವಕರಿಗೆ ಸ್ಫೂರ್ತಿ ತುಂಬುವ ರಚನೆಗಳು ಕವನ ಸಂಕಲನದಲ್ಲಿವೆ. ಎಂದು ಪುಸ್ತಕದ ಬೆನ್ನುಡಿಯಲ್ಲಿ ಶಿವಕುಮಾರ ದಂಡಿನ ಅವರು ತಿಳಿಸಿದ್ದಾರೆ.
ಲೋಕೇಶ್ ಕಲ್ಕುಣಿ ಅವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಲ್ಕುಣಿ ಗ್ರಾಮದವರು. ತಂದೆ ಮಹದೇವ, ತಾಯಿ ಸಿದ್ದಮ್ಮ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಡಿ.ಎಡ್ ಶಿಕ್ಷಣ ತರಬೇತಿಯನ್ನು ಸಹ ಪಡೆದು ಶಿಕ್ಷಕರಾಗಿ ಸೇವೆಯನ್ನು ಮಾಡಿರುತ್ತಾರೆ. 2007ರಲ್ಲಿ ಪೊಲೀಸ್ ಪೇದೆಯಾಗಿ ಆಯ್ಕೆಗೊಂಡಿದ್ದು, ಪ್ರಸ್ತುತ ಮಂಡ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ...
READ MORE