ಬಹುಮುಖಿ ಪ್ರತಿಭೆಯ ಲೇಖಕಿ ಡಾ. ಲತಾ ಗುತ್ತಿಯವರ ಆಕಾಶಗೀತೆ ಕವನ ಸಂಕಲನವು ಹೆಸರೇ ಸೂಚಿಸುವಂತೆ ಬಾನಂಗಳಕ್ಕೆ ಸಂಬಂಧಿಸಿದ ಕವಿತೆಗಳ ಸಂಕಲನವಾಗಿದೆ. ಡಾ.ಲತಾಗುತ್ತಿಯವರು ಕೈಗೊಂಡ ಹಲವು ವರ್ಷಗಳ ವಿಮಾನ ಪ್ರಯಾಣದ ಅನುಭವಗಳನ್ನು ಆಕಾಶಗೀತೆಗಳು ಕವಿತೆಗಳಲ್ಲಿ ವ್ಯಕ್ತಪಡಿಸಿದ್ದಾರೆ. ಪುಟ್ಟ ಕಿಟಕಿಯಾಚೆ ವಿಮಾನದೊಳಗಿಂದ ನೋಡುವಾಗ ಕಾಣುವ ತಾರೆ ನೀಹಾರಿಕೆ ಚುಕ್ಕಿ ಚಂದ್ರಮ ರವಿ ಮತ್ತು ಉದ್ದಕ್ಕೂ ಇದ್ದು ಎದ್ದೆದ್ದು ಬರುವ ಮೋಡಗಳನ್ನು ಬಗೆ ಬಗೆಯಾಗಿ ಲತಾಗುತ್ತಿಯವರ ಚಿತ್ರಿಸಿದ್ದಾರೆ. ಇವರ ಒಂದೊಂದು ಕವನವೂ ಮನಸ್ಸಿಗೆ ಮುದ ನೀಡುತ್ತವೆ. ಹೆಚ್ಚು ಸಲ ಹಾಗೂ ಹೆಚ್ಚು ದೂರದ ವಿಮಾನಯಾನ ಮಾಡಿದವರಿಗೆ ಈ ಆಕಾಶಗೀತಗಳು ಅವರವರ ಸ್ವಾನುಭವದ ಕವಿತೆಗಳಾಗಿ ಆತ್ಮೀಯವಾಗುತ್ತವೆ
ಮೂಲತಃ ಬೆಳಗಾವಿಯವರಾದ ಡಾ. ಲತಾ ಗುತ್ತಿ ಅವರು ತಮ್ಮ ಪ್ರವಾಸ ಕಥನ ಹಾಗೂ ಕವಿತೆಗಳ ಮೂಲಕ ಚಿರಪರಿಚಿತರಿದ್ದಾರೆ. ಲತಾ ಅವರು ಜನಿಸಿದ್ದು 1953ರ ಆಗಸ್ಟ್ 12ರಂದು. ಬೆಂಗಳೂರು ಕಂಪ್ಯೂಟರ್ ಟೆಕ್ನಾಲಜಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ ನಾಗನಗೌಡ, ತಾಯಿ -ಶಾಂತಾದೇವಿ ಪಾಟೀಲ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಿಎಚ್.ಡಿ. ಪದವಿ ಪಡೆದಿರುವ ಅವರು ಮೈಸೂರು ವಿಶ್ವವಿದ್ಯಾಲಯಿಂದ ಇಂಗ್ಲಿಷಿನಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಯುರೋನಾಡಿನಲ್ಲಿ (1993), ನಾ ಕಂಡಂತೆ ಅರೇಬಿಯಾ (1995), ಅಂಡಮಾನಿನ ಎಳೆಯನು ಹಿಡಿದು (2013), ಚಿರಾಪುಂಜಿಯವರೆಗೆ (2017) ಅವರ ಪ್ರವಾಸ ಕಥನಗಳಾದರೆ ಹೆಜ್ಜೆ (2004), ಕರಿನೀರು (2015) ಕಾದಂಬರಿಗಳು. “ಪ್ರವಾಸ ಸಾಹಿತ್ಯ ...
READ MORE