ಕವಿ ಲಕ್ಷ್ಮಿ ಟಿ.ಎನ್ ಅವರ ‘ಭಾವಬಿಂಬ’ ಕವನಗಳ ಸಂಕಲನವಾಗಿದೆ. ಈ ಕವನ ಸಂಕಲನಕ್ಕೆ ಬಿ.ಆರ್. ಲಕ್ಷ್ಮಣ್ ರಾವ್ ಮುನ್ನುಡಿ ಬರೆದಿದ್ದು. ‘ಅಂದಿನ ದಿನ ಬಹುತೇಕ ಉದಯೋನ್ಮುಖರ ಕವನಗಳಲ್ಲಿ ಕಾಣದ ನಿಯತ ಲಯ ಹಾಗೂ ಛಂದೋಬದ್ಧತೆ ಇಲ್ಲಿನ ಕವನಗಳಲ್ಲಿ ಎದ್ದು ಕಾಣುತ್ತಿವೆ. ಹೀಗಾಗಿ ಇಲ್ಲಿನ ರಚನೆಗಳನ್ನು ಕವನಗಳು ಎನ್ನುವುದಕ್ಕಿಂತ ಭಾವಗೀತೆಗಳೆಂದು ಹೇಳುವುದೇ ಹೆಚ್ಚು ಸೂಕ್ತವೆಂದು ತೋರುತ್ತದೆ. ಜೊತೆಗೆ, ಕವಿಯ ವಯೋಮಾನಕ್ಕೆ ಸಹಜವಾಗಿ, ಇವು ಬುದ್ಧಿಗಿಂತ ಹೆಚ್ಚು, ಭಾವಪ್ರಧಾನವಾಗಿ ಭಾವಲಹರಿಗಳೇ ಆಗಿವೆ ಎಂದಿದ್ದಾರೆ.
ಮೂಲತಃ ದಕ್ಷಿಣ ಕನ್ನಡದ ಪುತ್ತೂರಿನವರಾದ ಇವರು ಮಾರ್ಚ್ 8,1985ರಂದು ಟಿ.ಎಚ್.ನಾಗರಾಜ್ ಹಾಗೂ ಟಿ.ಎನ್ ಕಮಲ ಅವರ ಮಗಳಾಗಿ ಜನಿಸಿದರು. ಪ್ರಾಥಮಕ ಶಿಕ್ಷಣದಿಂದ ತೊಡಗಿ ಡಿಗ್ರಿ ಶಿಕ್ಷಣದವರೆಗೂ ಪುತ್ತೂರಿನಲ್ಲೇ ಮುಂದುರಿಸಿದ್ದ ಅವರು ಸ್ನಾತಕೋತ್ತರ ಶಿಕ್ಷಣವನ್ನು ಇಂಗ್ಲೀಷ್ ವಿಷಯದಲ್ಲಿ ಪೂರ್ತಿಗೊಳಿಸಿದರು..ಅಲ್ಲದೆ ಬಿಎಡ್, ಎಂ ಎಡ್ ಶಿಕ್ಷಣವನ್ನೂ ಪೂರ್ತೀಕರಿಸಿದ್ದಾರೆ. ವೃತ್ತಿಯಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿಯಾಗಿರುವ ಇವರು ಆರು ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡುವಲ್ಲಿ ನಿಪುಣರು. ಪಂದನಲ್ಲೂರು ಮಾದರಿಯ ಭರತನಾಟ್ಯದಲ್ಲಿ ಸೀನಿಯರ್ ಮಾಡಿರು ಇವರು,ನೃತ್ಯ ನಿರ್ದೇಶನ, ಗಾಯಕಿ ಮಾತ್ರವಲ್ಲದೆ ಧ್ವನಿ ಕಲಾವಿದೆಯಾಗಿಯೂ ಹೆಸರು ಮಾಡಿದವರು. 8 ಭಾಷೆಗಳಲ್ಲಿ ಕಾರ್ಯಕ್ರಮದ ನಿರೂಪಣೆ ಸೇರಿ ಇದುವರೆಗೂ 287 ಕಾರ್ಯಕ್ರಮಗಳ ...
READ MORE