ಚುಳುಕಾದಿರಯ್ಯ

Author : ಕಾಶೀನಾಥ ಅಂಬಲಗೆ

Pages 162

₹ 70.00




Year of Publication: 2006
Published by: ಪ್ರಗತಿ ಪ್ರಕಾಶನ
Address: ’ಬೇವು ಬೆಲ್ಲ’, ಜಯನಗರ, ವಿಶ್ವವಿದ್ಯಾಲಯ ರಸ್ತೆ, ಕಲಬುರಗಿ-585105

Synopsys

”ಚುಳುಕಾದಿರಯ್ಯ’ , ಪ್ರೊ. ಕಾಶೀನಾಥ ಅಂಬಲಗೆ ಅವರ ಕವನ ಸಂಕಲನ. ಹೈದ್ರಾಬಾದ -ಕರ್ನಾಟಕದ ಆಧುನಿಕೋತ್ತರ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಕವಿಯ ಬದುಕು ಹಾಗೂ ಕಾವ್ಯ ಕುರಿತು ಚಿಂತಕಿ ಡಾ. ಮೀನಾಕ್ಷಿ ಬಾಳಿ ಕೃತಿಯ ಮುನ್ನುಡಿಯಲ್ಲಿ ’ಅಕಾಡೆಮಿಕ್ ವಲಯದ ಜೀವವಿಲ್ಲದ ಅಕ್ಷರಗಳ ನಡುವೆ ಕಳೆದು ಹೋಗದೇ, ಜನಸಾಮಾನ್ಯರ ಕಷ್ಟ-ಕೋಟಲೆಗಳ ನಡುವೆ ನಡೆದು ಬಂದವರು. ವಿದ್ಯಾರ್ಥಿ, ರೈತ, ಕಾರ್ಮಿಕ, ಮಹಿಳೆ ಹೀಗೆ ಎಲ್ಲ ವರ್ಗದ ಚಳವಳಿಯೊಂದಿಗೆ ಧುಮುಕಿ, ಅವರ ನೋವುಗಳಿಗೆ ಅಕ್ಷರದಂಗಿ ತೊಡಿಸುವ ಹಠ ತೊಟ್ಟವರು. ಹೀಗಾಗಿ, ಅಂಬಲಗೆ ಸರ್ ಎಂದರೆ ಸಾಕು, ನಮ್ಮ ಭಾಗದ ಮಂದಿಗೆ ಶುದ್ಧ ಲಹರಿ ತಂಬುವ ಪ್ರೀತಿಯ ಕಾವ್ಯವೆಂದೇ ಗ್ರಹಿಕೆ’ ಎಂದು ಪ್ರಶಂಸಿಸಿ, ಇಡೀ ಕವನ ಸಂಕಲನದ ಜೀವಾಳವನ್ನು ತೋರಿದ್ದಾರೆ. ಇಲ್ಲಿಯ ಚುಟುಕುಗಳಿಗೆ ಸ್ಪಂದಿಸಿರುವ ಡಾ. ಬಾಳಿ, ಕಾವ್ಯಕ್ಕಿಂತ ಬದುಕಿಗೆ ಹೆಚ್ಚು ಬದ್ಧವಾದ ಈ ಕವಿಯ ಕಾವ್ಯವು ಬೀದರಿ ಭಾಷೆಯ ಆಡುಮಾತಿನ ಜಾಡನ್ನು ಹಿಂಬಾಲಿಸಿಕೊಂಡು ಹೋಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ಕಾಶೀನಾಥ ಅಂಬಲಗೆ
(10 July 1947)

ಕಾಶೀನಾಥ ಅಂಬಲಗೆ ಅವರು ಹುಟ್ಟಿದ್ದು 10-07-1947 ರಲ್ಲಿ. ಬೀದರ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಮುಚಳಂಬಿ ಎಂಬ ಗ್ರಾಮದಲ್ಲಿ. ಇವರ ತಂದೆ ರಾಚಪ್ಪ ಅಂಬಲಗೆ, ತಾಯಿ ಗುರಮ್ಮ ಅಂಬಲಗೆ. ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅಂಬಲಗೆ ಹಿಂದಿ ಭಾಷೆಯಲ್ಲೂ ಎಂ.ಎ ಪದವಿ ಗಳಿಸಿದ್ದಾರೆ. ಬಿ.ಎಡ್ ಜೊತೆಗೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪಿಎಚ್.ಡಿ ಪದವಿಯನಂತರ ಅಧ್ಯಾಪಕ ವೃತ್ತಿಯನ್ನು ಆಯ್ದುಕೊಂಡ ಅವರು ಮಹಾವಿದ್ಯಾಲಯದಲ್ಲಿ 21ವರ್ಷ, ವಿಶ್ವವಿದ್ಯಾಲಯದಲ್ಲಿ 12 ವರ್ಷ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ತೊಡಗಿಸಿಕೊಂಡಿದ್ದಾರೆ.  ಕವಿ, ಲೇಖಕ, ಸಾಹಿತಿ, ಕಾದಂಬರಿಗಾರರಾದ ಅಂಬಲಗೆ ಅನುವಾದಕರಾಗಿಯೂ ಪ್ರಸಿದ್ಧರು. ಜೊತೆಗೆ ...

READ MORE

Related Books