‘ರೆಕ್ಕೆ ಇಲ್ಲದ ಹಕ್ಕಿ’ ಕೃತಿಯು ಮಹೇಶ ಎಸ್. ರುದ್ರಕರ್ ಅವರ ಕವನಸಂಕಲನವಾಗಿದೆ. ಈ ಕೃತಿಯು ಲೋಕಜ್ಞಾನದ ಸಂಗತಿಗಳನ್ನು ತಿಳಿಸುತ್ತಾ ವೈಚಾರಿಕವಾದ ಸ್ವರೂಪವನ್ನು ಪಡೆದುಕೊಂಡಿದೆ. ಹಾಗೆಯೇ ಅದರೊಳಗಿನ ಮಿತಿ-ಮೌಲ್ಯಗಳನ್ನು ಇಲ್ಲಿ ಚರ್ಚೆಗೆ ಒಳಪಡಿಸಲಾಗಿದೆ. ಬುದ್ಧ, ಬಸವಣ್ಣ, ಬಾಬಾಸಾಹೇಬರ ಅರಿವಿನ ಬೆಳಕಿನಲ್ಲಿ ಸಾಮಾಜಿಕ ಮೌಲ್ಯಪ್ರಜ್ಞೆಯನ್ನು ರೂಪಿಸುವ ಕವಿಯ ಆಶಯ ಇಲ್ಲಿನ ಬರಹದಲ್ಲಿ ಅಭಿವ್ಯಕ್ತಗೊಂಡಿದೆ. ನೈತಿಕತೆ, ಆದರ್ಶಗಳು ಕೇವಲ ನುಡಿಗೆ ಮಾತ್ರ ಸೀಮಿತವಾಗದೆ, ನಮ್ಮ ನಡೆಯಾಗಬೇಕು, ಬದುಕಾಗಬೇಕು, ನಿತ್ಯಜೀವನದ ಅನುಸರಣೆಯಾಗಬೇಕೆಂದು ಇಲ್ಲಿನ ವಚನಗಳು ಬಯಸುತ್ತವೆ. ಜಾತಿ-ಅಸ್ಪೃಶ್ಯತೆ-ಅಸಮಾನತೆಯಿಲ್ಲದ ಸಮಾನತೆಯ ಮಾನವೀಯ ಸಮಾಜವನ್ನು ಅರಿವಿನ ನೆಲೆಯಲ್ಲಿ ಕಟ್ಟಿಕೊಳ್ಳುವಲ್ಲಿ ವ್ಯಕ್ತಿಗತ ಹೊಣೆಗಾರಿಕೆಯ ಮಹತ್ವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.