ಸೃಜನಶೀಲ ಬದುಕಿನ ಪ್ರಾಮಾಣಿಕ ಅಭಿವ್ಯಕ್ತಿ ಈ ಸಂಕಲನದ ಜೀವಾಳ. ಕವನ, ಭಾವಗೀತೆ, ಹನಿಗವನ, ಗಜಲ್ ಹೀಗೆ ಎಲ್ಲ ಪ್ರಕಾರದ ಸತ್ವಭರಿತದ ಹದವಿರುವ ಸಂಕಲನ.
ಭಾವನೆಗಳಿಗೆ ಧಕ್ಕೆ ಬಾರದಂತೆ ಎದೆ ಭಾರವನ್ನಿಳಿಸುವ ರತ್ಕ ಬಡವನಹಳ್ಳಿ ಅವರ ಕವಿತೆಯ ಸಾಲು ಹೀಗಿದೆ: ’ನೋವ ಹೇಳಿಕೊಳ್ಳಬೇಕೆಂಬ ತುಡಿತವಿಲ್ಲ, ಬರಿದಾಗಿ ಬದುಕಿದೆನೆಂಬ ವೇದನೆಯಿಲ್ಲ, ಏನೋ ಕಳೆದುಕೊಂಡೆನೆಂಬ ಕೊರಗಿಲ್ಲ, ಮೌನದ ಸುಳಿಯೊಳಗಣ ಸುಳಿ ಈ ಸ್ವಗತ’. ಇಂತಹ ಸಾಲುಗಳು ಗಮನ ಸೆಳೆಯುತ್ತವೆ.
ಕವಯತ್ರಿ ನಾಗರತ್ನ ಅವರು 1964 ಆಗಸ್ಟ್ 12 ರಂದು ತುಮಕೂರು ಕಿಲ್ಲೆಯ ಮಧುಗಿರಿ ತಾಲ್ಲೂಕಿನ ಬಡವನಹಳ್ಳಿಯಲ್ಲಿ ಜನಿಸಿದರು. ಅವರ ಕಾವ್ಯನಾಮ- ರತ್ನಾ ಬಡವನಹಳ್ಳಿ. ’ಮೌನದಿಂಚರ, ಮುಂಜಾವಿನ ಮಾತು’ ಅವರ ಎರಡು ಕವನ ಸಂಕಲನಗಳು. ದಾಸ ಸಾಹಿತ್ಯದಲ್ಲೂ ಆಸಕ್ತಿ ಹೊಂದಿದ್ದು ಮುಕ್ತಕ, ಗಜ಼ಲ್, ಹನಿಗವನ, ಕವನಗಳು, ಭಾವಗೀತೆ, ಸಣ್ಣಕಥೆ ಬರೆಯುವ ಹವ್ಯಾಸ ಹೊಂದಿದ್ಧಾರೆ. ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದು, ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳು ದೊರೆತಿವೆ. ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ ನಿಂದ ಕನ್ನಡ ಸೇವಾರತ್ನ ಹಾಗೂ ಮಧುಗಿರಿ ತಾಲ್ಲೂಕಿನಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ...
READ MORE