ಹೂಮನದ ಹನಿ- ಕವಿ ಎಸ್. ರಾಜು ಅವರ ಪ್ರಥಮ ಕವನ ಸಂಕಲನ. ಇಲ್ಲಿಯ ಕವನಗಳು ಭಾವನಾತ್ಮಕವಾಗಿದ್ದು, ಬಡತನ ಅನ್ಯಾಯ ಅಸಹಾಯಕತೆಗಳ ವಿರುದ್ಧ ಧ್ವನಿ ಎತ್ತಿವೆ. ಸಂಸ್ಕೃತಿ, ಭಾಷಾಭಿಮಾನ, ಪರಿಸರ, ದೇಶಭಕ್ತಿ ಮತ್ತು ಸ್ನೇಹ ಪ್ರೀತಿಯೂ ಅನಾವರಣಗೊಂಡಿದೆ. ಕಾವ್ಯವಸ್ತು, ಶೈಲಿ, ಸಾಮಾಜಿಕ ಹೊಣೆಗಾರಿಕೆ ಇಂತಹ ಸಾಹಿತ್ಯಕ ಅಂಶಗಳು ಓದುಗರ ಗಮನ ಸೆಳೆಯುತ್ತವೆ.
ಕವಿ ರಾಜು ಎಸ್ (ರಾಜಣ್ಣ ಎಸ್) ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲ್ಲೂಕಿನವರು. ಜನನ: 13-03-1992. ಪದವಿ ಮತ್ತು ಸ್ನಾತಕೋತ್ತರ ಪದವೀಧರರು. ಕಲೆ ಮತ್ತು ಸಾಹಿತ್ಯದಲ್ಲಿ ಆಸಕ್ತಿ. ಬೆಂಗಳೂರಿನ ಕ್ರೈಸ್ತ್ ಕಾಲೇಜು ನಡೆಸುವ ಬೇಂದ್ರೆ ಸ್ಮೃತಿ ಅಂತರ್ ಕಾಲೇಜು ಕವನ ಸ್ಪರ್ಧೆಯಲ್ಲಿ ಎರಡು ಬಾರಿ ಬಹುಮಾನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ನಡೆಸುವ ಯುವಕವಿ ಕವನ ಸ್ಪರ್ಧೆಯಲ್ಲೂ ಬಹುಮಾನ ಪಡೆದಿದ್ದಾರೆ. ಇವರ ಮೊದಲ ಕೃತಿ ಹೊಮನದ ಹನಿ. ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದಿಂದ 2019ನೇ ಸಾಲಿನ ಈ ಕೃತಿ ಆಯ್ಕೆಯಾಗಿದೆ. ...
READ MORE