‘ಕ್ಯಾಪ್ಟನ್’ ಕೃತಿಯು ಜ.ನಾ ತೇಜಶ್ರೀ ಅವರ ಕವನಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಭೌತಿಕವಾಗಿ ಕಣ್ಮರೆಯಾದ ಬಳಿಕ ಹೊರಬರುತ್ತಿವೆಯಾದ್ದರಿಂದ ಸಹಜವಾಗಿಯೇ ಇಲ್ಲಿ ಸಾವಿನ ನೆರಳು ಕೂಡ ದಟ್ಟವಾಗಿ ಹಬ್ಬಿದೆ. ಸಾವಿನ ನೆರಳು ಎಂದರೆ ಪಂಚೇಂದ್ರಿಯಗಳಿಗೆ ಅದುವರೆಗೂ ಲಭ್ಯವಿದ್ದ ಕೆಲವೊಂದು ಅನುಭವಗಳಿಗೆ ಒಬ್ಬ ವ್ಯಕ್ತಿ ನಾಟ್ ಅವೈಲೇಬಲ್ ಆದ, ಆ ‘ಗೈರು’ ಕಾಡುವ ಸಂಕಟ. ಕಣ್ಣಿಂದ ಕಾಣಲಾರೆವು, ಮುಟ್ಟಲಾರೆವು, ನಮ್ಮ ಮಾತು ಕೇಳುವಂತೆ ಒತ್ತಾಯಿಸಲಾರೆವು, ಅವರ ಮಾತು ಕೇಳಿಸಿಕೊಳ್ಳಲಾರೆವು...ಅವರಿಲ್ಲ, ಅವರಿಲ್ಲ ಎನಿಸುವ ಪ್ರತಿಕ್ಷಣದ ಸಂಕಟ ಅದು. ಈ ಮೂಲಕ ಲೇಖಕಿ ವಾಸ್ತವ ಮತ್ತು ಕವಿತೆಯ ಮೂಲಕ ತಾವು ಕಟ್ಟಿಕೊಂಡ ವಾಸ್ತವ ಎರಡರ ನಡುವೆ ಒಂದು ಗೆರೆಯೆಳೆಯುತ್ತಾರೆ ಮತ್ತು ಅದೇ ಹೊತ್ತಿಗೆ, ತಾವು ಸೃಜಿಸಿದ ಕಲ್ಪಿತ ವಾಸ್ತವದ ಮುಖೇನ ತಾವು ಬದುಕಿನಲ್ಲಿ ಪಡೆದುಕೊಳ್ಳುವುದರ ಕುರಿತು ಕೂಡಾ ಭರವಸೆ ಹೊಂದಿದ್ದಾರೆ. ಎಲ್ಲರ ಬದುಕಿನಲ್ಲಿಯೂ ಸಾಹಿತ್ಯದ ನೆಲೆಯೇ ಅದು. ಸಾಹಿತ್ಯ ಕಟ್ಟಿಕೊಡುವ ಬದುಕು, ಅನುಭವ, ಜಗತ್ತು, ವಾಸ್ತವ ಯಾವುದೂ ರಿಯಲ್ ಅಲ್ಲ. ಅದು ವರ್ಚ್ಯುಯಲ್. ಆದರೆ ಕಲ್ಪಿತ ವಾಸ್ತವದ ಮೂಲಕವೇ (ಬಹುಶಃ ಕೇವಲ ಕಲ್ಪಿತವಾಸ್ತವದ ಮೂಲಕ ಮಾತ್ರವೇ) ನಾವು ನಮ್ಮ ಬದುಕಿನಲ್ಲಿ ಪಡೆದುಕೊಳ್ಳಬಹುದಾದ್ದು ತುಂಬ ಇದೆ. ಅಂಥ ಒಂದು ಭರವಸೆಯೇ ಸಾಹಿತ್ಯದ ಓದು ಮತ್ತು ರಚನೆಯ ಹಿಂದಿರುವ ಸೆಲೆಯಾಗಿದೆ ಎಂದಿದೆ.
ಎಂ.ಎ. (ಇಂಗ್ಲಿಷ್) ಮತ್ತು ಭಾಷಾಂತರ ಡಿಪ್ಲೊಮಾ ಪದವೀಧರೆ ಆಗಿರುವ ತೇಜಶ್ರೀ ಅವರು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದು ವರ್ಷ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ 'ಟ್ಯಾಗೋರ್ ಪೀಠ'ದಲ್ಲಿ ಸಂಶೋಧನಾ ಸಹಾಯಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಲಯ, ತಿಳಿಗೊಳ, ಕತ್ತಲೆಯ ಬೆಳಗು, ಅವನರಿವಲ್ಲಿ, ಉಸುಬುಂಡೆ, ಮಾಗಿಕಾಲದ ಸಾಲುಗಳು (ಕವನ ಸಂಕಲನಗಳು) ಭಾರತ ರಾಷ್ಟ್ರೀಯ ಚಳುವಳಿ, ಚೀನಿ ತತ್ವಶಾಸ್ತ್ರದ ಕತೆ, ಕಡಲ ತಡಿಯ ಗುಡಾರ, ಬೆತ್ತಲೆ ಫಕೀರ, ಇರುವೆ ಮತ್ತು ಪಾರಿವಾಳ (ಅನುವಾದಿತ ಕೃತಿಗಳು) ’ನೀನಾಸಂ'ಗಾಗಿ ವೋಲೆ ಸೋಯಿಂಕಾನ ಸಾವು ಮತ್ತು ರಾಜನ ಕುದುರೆ ಸವಾರ' ನಾಟಕದ ಅನುವಾದ. ಕವಿ ರವೀಂದ್ರ, ...
READ MORE