ಹಾಲು ಕುದಿದು ಬಾಸುಂದಿಯಾದ ಹಾಗೆಯೇ ಭಾವ ತೀವ್ರವಾಗಿ ಕಾಡಿ ಭಾಷೆ ಸತ್ವಯುತವಾಗಿ ಕವಿತೆಗಳನ್ನು ಬರೆಯುವವರು ಬೆಂಗಳೂರಿನ ಮಂಜುಳಾ ಡಿ. ಇವರು ಗೃಹಕೃತ್ಯ, ಉದ್ಯೋಗದ ನಡುವೆ ಕಾವ್ಯಾಸಕ್ತಿಯನ್ನೂ ನಿರಂತರವಾಗಿ ಪೋಷಿಸಿಕೊಂಡು ಬಂದವರು. 'ಭೇಟಿಯಾಗದ ಭೇಟಿಗಳು' ಇತ್ತೀಚೆಗೆ ಬಿಡುಗಡೆ ಕಂಡ ಅವರ ಹೊಸ ಕವನ ಸಂಕಲನ. ಇದರಲ್ಲಿರುವ ಕೆಲವು ಕವಿತೆಗಳು, ಕೆಲವು ಗಪದ್ಯಗಳು ಸೊಗಸಾಗಿವೆ. ಇದನ್ನು ಕಥನ ಕವನಗಳು ಎನ್ನಬಹುದು ಎಂದು ಬೆನ್ನುಡಿಯಲ್ಲಿ ಅಣಕು ರಾಮನಾಥ್ ಅವರು ಬರೆದಿದ್ದಾರೆ. ಕವಿತೆಗಳ ಗಮನ ಸೆಳೆಯುವುದು ಸ್ವಂತಿಕೆಯಲ್ಲಿ ಹಾಗೂ ಅನನ್ಯತೆಯಲ್ಲಿ. ಎಂದೂ ಭೇಟಿಯಾಗದವನ ಕಲ್ಪನೆಯು ಸತ್ಯವೋ, ಭ್ರಮೆಯೋ, , ರೂಪು ಚೆಹರೆ ಅರಿಯದವನನ್ನು ಈ ಕಥಾನಾಯಕಿಯೊಮ್ಮೆ ಭೇಟಿಯಾಗಿಬಿಡಲಿ ಎಂಬ ಭಾವ ಸಂಕಲನದ ಓದುಗರಿಗೆ ನಿಸ್ಸಂಶಯವಾಗಿ ಹುಟ್ಟುತ್ತದೆ. ಕೆಲವು ಕವಿತೆಗಳನ್ನು ತನ್ನದೇ ಪ್ರತಿಬಿಂಬದೊಂದಿಗೆ ಮಾತಾಡಿದಂತೆಯೂ ಇವೆ.
ಲೇಖಕಿ ಮಂಜುಳ ಡಿ. ಅವರು ಉದಯವಾಣಿ ಪತ್ರಿಕೆಯ ಅಂಕಣಕಾರರು. ಈ ಅಂಕಣಗಳ ಬರಹಗಳನ್ನು ಸಂಗ್ರಹಿಸಿ ಅವರು ನಿನಾದವೊಂದು ಎಂಬ ಕೃತಿ ರಚಿಸಿದ್ದಾರೆ. ...
READ MORE