ಆಕಾಶ ಸೇತುವೆ

Author : ಎಚ್. ಎಸ್. ವೆಂಕಟೇಶಮೂರ್ತಿ

₹ 70.00




Year of Publication: 2016
Published by: ವಿವಿದ್ಲಿಪಿ
Address: ಬೆಂಗಳೂರು

Synopsys

‘ಆಕಾಶ ಸೇತುವೆ’ ಕೃತಿಯು ಎಚ್.ಎಸ್ ವೆಂಕಟೇಶಮೂರ್ತಿ ಅವರ ಟಿಂಬರ್ನ್ ಅಬೆ ಮತ್ತು ಇತರ ಕವನಗಳನ್ನು ಒಳಗೊಂಡ ಕೃತಿಯಾಗಿದೆ. ಲೇಖಕ ಮಲೇಶಿಯಾಕ್ಕೆ ಹೋಗಿದ್ದ ನೆನಪುಗಳನ್ನು ಮೆಲುಕು ಹಾಕುತ್ತಾ, ಅಲ್ಲಿನ ವಿಚಾರಗಳನ್ನು ಕವನದ ಮೂಲಕ ಕಟ್ಟಿಕೊಡುತ್ತಾರೆ. `ಲಂಕಾವಿ' ಮಲೇಶಿಯಾದ ಒಂದು ಸುಂದರ ದ್ವೀಪ. ಪ್ರಕೃತಿಯ ಅಗಾಧತೆಯನ್ನು ಅರಿವಿಗೆ ತಂದುಕೊಳ್ಳಲು ಹೇಳಿ ಮಾಡಿಸಿದ ಜಾಗ.  ಅಲ್ಲಿರುವ ಮ್ಯಾತ್ ಮ್ಯಾಂಚಿಂಗ್ ಚಾಂಗ್ ಪರ್ವತ ಶ್ರೇಣಿಯು ನಿಜಕ್ಕೂ ‘ಗಗನಚುಂಬಿ’ ಎಂಬ ಮಾತನ್ನು ನಮ್ಮ ಅನುಬೋಧೆಗೆ ತರುವಂಥದ್ದು. ದಟ್ಟ ಕಾಡಿಂದ ಹಚ್ಚ ಹಸುರಾಗಿ ಕಂಗೊಳಿಸುವ ಆ ನಿತ್ಯ ಹರಿದ್ವರ್ಣ ಪರ್ವತ ಪಂಕ್ತಿಯಲ್ಲಿ ಅಲ್ಲಲ್ಲಿ ಆಕಾಶಕ್ಕೆ ಎಟಕಾಯಿಸುವ ಮಹೋನ್ನತ ಪರ್ವತ ಶೃಂಗಗಳಿವೆ. ಅಂಥ ಎರಡು ಶೃಂಗಗಳ ನಡುವೆ ಒಂದೇ ಸ್ತಂಭ ತೂಗಿ ಹಿಡಿದಿರುವ, ಪರ್ವತಗಳ ಬಟ್ಟು ಹಾಕಿದ ತೂಗು ಸೇತುವೆಯಿದೆ ಎಂದು ಕೃತಿಯ ಕುರಿತು ಕವಿ ಹೇಳುತ್ತಾರೆ. 

About the Author

ಎಚ್. ಎಸ್. ವೆಂಕಟೇಶಮೂರ್ತಿ
(23 June 1944)

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...

READ MORE

Related Books