ಸಾಹಿತಿ, ವಿಮರ್ಶಕ, ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರ ಕೃತಿ ’ಸುನೀತಭಾವ’. ಕಾವ್ಯಸರಣೆಯನ್ನು ಹೊತ್ತ ಈ ಪುಸ್ತಕ ಅಷ್ಟಷಟ್ಪದಿಯಲ್ಲಿದೆ. ಕನ್ನಡ ಸಾಹಿತ್ಯ ಲೋಕದ ಹಿರಿಯರು, ಕವಿಗಳು, ಲೇಖಕರ ಚಿತ್ರವೊಂದನ್ನು ಒಳಗಣ್ಣಿನಲ್ಲಿ ಅಳೆದು ಅವರ ಬಗೆಗಿನ ಅಭಿಮಾನ, ಅಕ್ಕರೆಯನ್ನು ಕವಿ ಎಚ್.ಎಸ್.ವಿ ಇಲ್ಲಿ ಓದುಗರಿಗೆ ನೀಡಿದ್ದಾರೆ. ಸುನೀತಭಾವವನ್ನು ಕವಿ ವಿನೀತಭಾವದ ರಚನೆಗಳ ಮೂಲಕ ಅನೇಕರನ್ನು ಇಲ್ಲಿ ಸ್ಮರಿಸಿಕೊಂಡಿದ್ಧಾರೆ.
ಬೇಂದ್ರೆ, ಜಿ.ಎಸ್.ಅಮೂರ, ಯು ಆರ್ ಅನಂತಮೂರ್ತಿ, ಸಿ.ಅಶ್ವತ್ಥ, ಕೆ.ವಿ ಅಕ್ಷರ, ಟಿ.ಪಿ ಅಶೋಕ, ಫಾ. ಅಂದ್ರಾದೆ, ಆನಂದರಾಮ ಉಪಾಧ್ಯ, ಈಶ್ವರಚಂದ್ರ, ಓ.ಎಲ್ ನಾಗಭೂಷಣಸ್ವಾಮಿ, ಬಿ ವಿ ಕಾರಂತ, ಕುವೆಂಪು, ಗಿರಡ್ಡಿ ಗೋವಿಂದರಾಜು, ಅಡಿಗ, ಜಿ,ಕೆ ಗೋವಿಂದರಾವ್, ಚೆನ್ನವೀರ ಕಣವಿ, ಚಂಪಾ, ಚಂದ್ರಶೇಖರ ಕಂಬಾರ, ಚಂದ್ರಶೇಖರ ತಾಳ್ಯ, ಚಿಂತಾಮಣಿ ಕೊಡ್ಲೆಕೆರೆ, ಬಿ ಜಯಶ್ರೀ, ಎನ್. ಎಸ್. ಚಿದಂಬರರಾವ್, ಜಯಂತ ಕಾಯ್ಕಿಣಿ, ಜೋಗಿ, ದುಂಡಿರಾಜ, ಕೆ ವಿ ತಿರುಮಲೇಶ್, ಜ.ನಾ ತೇಜಶ್ರಿ, ದೇವನೂರು ಮಹಾದೇವ, ಮಲ್ಲಿಕಾರ್ಜುನ ಹಿರೇಮಠ, ಎಸ್.ದಿವಾಕರ, ಎಂ.ಆರ್ ದತ್ತಾತ್ರಿ, ಕೆ. ಎಸ್ ನರಸಿಂಹಸ್ವಾಮಿ, ವೈದೇಹಿ, ಟಿ.ಎನ್ ಸೀತಾರಾಮ್, ಶಂಕರ್, ವಿವೇಕ ಶಾನಭಾಗ, ಜಿ.ಎಸ್ ಶಿವರುದ್ರಪ್ಪ, ಮೈಸೂರು ಅನಂತಸ್ವಾಮಿ ಇನ್ನೂ ಹಲವಾರು ಕವಿಗಳ, ಲೇಖಕರ, ಕಲಾವಿದರ ಕುರಿತಾದ ಸಾಹಿತ್ಯ ರಚನೆ ಮತ್ತು ವ್ಯಕ್ತಿ ಚಿತ್ರಣಗಳ ರಚನೆಗಳು ಈ ಕೃತಿಯಲ್ಲಿದೆ
ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...
READ MORE