‘ಮಾತು ಮೌನಗಳ ನಡುವೆ’ ಕೃತಿಯು ಎ.ಎನ್ ರಮೇಶ್ ಗುಬ್ಬಿ ಅವರ ಕವನಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ನಾ. ಸೋಮೇಶ್ವರ ಅವರು, ‘ಕೃತಿಯಲ್ಲಿ 108 ಕವನಗಳಿವೆ. ಕವನಗಳ ವಸ್ತು ವೈವಿಧ್ಯಮಯ. ಸೂರ್ಯನ ಬೆಳಕು ಎಷ್ಟೆಲ್ಲ ವಸ್ತುಗಳ ಮೇಲೆ ಬೀಳಲು ಸಾಧ್ಯವೋ. ಆ ಎಲ್ಲ ವಸ್ತುಗಳು ಮತ್ತು ವಿಚಾರಗಳು ರಮೇಶ್ ಗುಬ್ಬಿಯವರ ಕವನಗಳಿಗೆ ವಸ್ತುವಾಗಬಲ್ಲವು. ಒಂದು ದೀಪದಿಂದ ಹಿಡಿದು ಬುದ್ಧನವರೆಗೆ , ಅಸಂಖ್ಯ ವಸ್ತು-ವಿಚಾರಗಳನ್ನು ಇವರ ಕವನಗಳಿಗೆ ವಸ್ತುವಾಗಿವೆ. ರಮೇಶ್ ಗುಬ್ಬಿಯವರು ತಮ್ಮ ಕವನಗಳ ಸ್ವರೂಪವನ್ನು ತಾವೇ ಉಪಶೀರ್ಷಿಕೆಯಾಗಿ ಬರೆದುಕೊಂಡಿದ್ದಾರೆ. ‘ಶುಭ್ರ ಅಂತರ್ಯದ ಪಿಸು ಮಾತುಗಳು’ ಎಂದು! ಅವರ ಅನಿಸಿಕೆ ಸತ್ಯ. ಇವರ ಕವನಗಳಲ್ಲಿ ಭಾಷಣಗಳು, ಘೋಷಣೆಗಳು, ಸಿದ್ದಾಂತಗಳಿಲ್ಲ, ತೆಗಳುವ , ಹೊಗಳುವ, ಟೀಕಿಸುವ, ಮನಸ್ಸುಗಳನ್ನು ಒಡೆಯುವ, ದೇಶಕ್ಕೆ ಬೆಂಕಿ ಹಚ್ಚುವ ಮಾತುಗಳಿಲ್ಲ. ತಮ್ಮ ಅನಿಸಿಕೆಗಳನ್ನು ಅತ್ಯಂತ ಮೆಲು ಧ್ವನಿಯಲ್ಲಿ ಆದರೆ ಸ್ಪಷ್ಟವಾಗಿ ನುಡಿಯುವುದು ಅವರ ಹೆಚ್ಚುಗಾರಿಕೆಯಾಗಿದೆ ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ಎ.ಎನ್.ರಮೇಶ್ ಗುಬ್ಬಿ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದರು. ವೃತ್ತಿಯಲ್ಲಿ ಕಾರವಾರ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿ. ಪ್ರವೃತ್ತಿಯಲ್ಲಿ ಸಾಹಿತಿ. ಕವನ, ಚುಟುಕು, ಕಥೆ, ನಾಟಕ, ಚಿತ್ರಕಥೆ ರಚನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಗುಬ್ಬಿಯ ಕಲರವ’, ‘ಚುಟುಕು-ಚಿತ್ತಾರ’, ‘ಎಡನೀರೊಡನೆಯನಿಗೆ ಚುಟುಕು ಪುಷ್ರ್ಪಾಚನೆ’, ‘ಕೇಶವನಾಮ ಚೈತನ್ಯಧಾಮ’ ಎಂಬ ಚುಟುಕು ಸಂಕಲನಗಳು, ‘ಹನಿ-ಹನಿ’ ಎಂಬ ಹನಿಗವನ ಸಂಕಲನ, ‘ಭಾವದಂಬಾರಿ’ ಕಥಾಸಂಕಲನ, ‘ಶಕ್ತಿ ಮತ್ತು ಅಂತ’ ಅವಳಿ ನಾಟಕ ಸಂಕಲನ, ‘ಕಿಸ್ ಮಾತ್ರೆ’ ಎನ್ನುವ ಹಾಸ್ಯಗವನ ಸಂಕಲನ, ‘ಹೂವಾಡಿಗ’, ‘ಕಾಡುವ ಕವಿತೆಗಳು’ ಕವನ ಸಂಕಲನಗಳು ಪ್ರಕಟವಾಗಿದೆ. ಕಾಸರಗೋಡಿನ ಎಡನೀರಿನಲ್ಲಿ ನಡೆದ ಪ್ರಪ್ರಥಮ ಅಂತರರಾಜ್ಯ ಚುಟುಕು ಸಮ್ಮೇಳನದಲ್ಲಿ ‘ಚುಟುಕು ಭಾರ್ಗವ’ ...
READ MORE