‘ಕನ್ನಡಿಯಲ್ಲಿ ಮನುಷ್ಯ ಮಾತ್ರ’ ಕವಿ ಡಾ. ಚಿದಾನಂದ ಸಾಲಿ ಅವರ ಕವನ ಸಂಕಲನ. ಇದು 2022ನೇ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತ ಕೃತಿ. ಕೃತಿಗೆ ಪ್ರೊ. ಎಂ.ಎಸ್. ಆಶಾದೇವಿ ಅವರ ಮುನ್ನುಡಿ ಇದೆ. ಕೃತಿಯ ಕುರಿತು ಬರೆಯುತ್ತಾ ‘ಸಮಕಾಲೀನ ಕನ್ನಡ ಕಾವ್ಯದ ಆಕೃತಿಯನ್ನು ರೂಪಿಸುತ್ತಿರುವವರಲ್ಲಿ ಚಿದಾನಂದ ಸಾಲಿಯವರೂ ಒಬ್ಬರು. ಒಬ್ಬರು ಮಾತ್ರವಲ್ಲ, ಮುಖ್ಯರು. ಈ ನಿಲುವಿಗೆ ಹಿಡಿದ ಕನ್ನಡಿಯಂತಿದೆ ಈ ಕವನ ಸಂಕಲನ. ಇವರ ಕಾವ್ಯದ ಭಾಷೆ ಕನ್ನಡ ಕಾವ್ಯದ ಸೌಂದರ್ಯಕ್ಕೆ ಹೊಸ ಆಯಾಮವನ್ನು ಕೊಡುತ್ತಿದೆ. ವಸ್ತು ಮತ್ತು ಭಾಷೆ ಎರಡರಲ್ಲಿಯೂ ಇವರಿಗಿರುವ ಹಿಡಿತ ಮತ್ತು ಬದ್ಧತೆಗಳು, ಇವರನ್ನು ಕನ್ನಡ ಕಾವ್ಯ ಕ್ಷೇತ್ರದಲ್ಲಿ ಬಹುದೂರಕ್ಕೂ ಒಯ್ಯುತ್ತವೆ ಎನ್ನುವುದರಲ್ಲಿ ಅನುಮಾನ ಇಲ್ಲ ಎಂದಿದ್ದಾರೆ. ತೀರ್ಪುಗಾರರ ಟಿಪ್ಪಣಿಯಲ್ಲಿ ಕವನಗಳ ಕುರಿತು ಬರೆದಿರುವ ಡಾ. ಚಿಂತಾಮಣಿ ಕೊಡ್ಲೆಕೆರೆ ಅವರು ಕನ್ನಡ ಕಾವ್ಯ ಪರಂಪರೆಯ ಅರಿವು ಈ ಕವಿಗಿದೆ. ಈ ಕವಿತೆಗಳು ಗಹನವಾದುದನ್ನು ಹೇಳುವ ಮಹತ್ವಾಕಾಂಕ್ಷೆಯನ್ನು ಪ್ರಕಟಿಸುತ್ತಿವೆ. ತತ್ವಪದಗಳ ಮಾದರಿಯ ಕವಿತೆಗಳಲ್ಲಿ ಇವರ ಸಾಧನೆ ವಿಶೇಷವಾದುದಾಗಿ ಕಂಡಿತು. ಹಲವು ಲಯಗಳಲ್ಲಿ ಪದ್ಯ ಕಟ್ಟುವ ಇವರ ಪ್ರಯತ್ನಗಳು ಮೆಚ್ಚುಗೆ ಹುಟ್ಟಿಸಿದವು ಎಂದಿದ್ದಾರೆ.
ಕವಿ-ಕತೆಗಾರ- ಅನುವಾದಕ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು. ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ ಎಂ.ಎ. ಪದವಿ ಪಡೆದಿರುವ ಅವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಅವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರು. ಪ್ರಜಾವಾಣಿ ಕಥಾಸ್ಪರ್ಧೆ, ಕ್ರೈಸ್ಟ್ ಕಾಲೇಜ್ ಕಾವ್ಯಸ್ಪರ್ಧೆ, ಕನ್ನಡಪ್ರಭ ಕಥಾಸ್ಪರ್ಧೆ, ಸಂಕ್ರಮಣ ಕಾವ್ಯಸ್ಪರ್ಧೆ, ಸಂಚಯ ಕಾವ್ಯಸ್ಪರ್ಧೆ, ಪ್ರಜಾವಾಣಿ ಕಾವ್ಯಸ್ಪರ್ಧೆ ಮುಂತಾದವುಗಳಲ್ಲಿ ಬಹುಮಾನ ಪಡೆದಿದ್ದಾರೆ. ರೆ. ..(ಕವಿತೆ); ಮೌನ(ಕನ್ನಡ ಗಜಲ್); ಧರೆಗೆ ನಿದ್ರೆಯು ಇಲ್ಲ(ಕಥಾಸಂಕಲನ), ಚೌಕಟ್ಟಿನಾಚೆ (ಬೆಟ್ಟದೂರರ ಕಲಾಕೃತಿಗಳನ್ನು ಕುರಿತು); ಶಿಕ್ಷಣ ಮತ್ತು ಜೀವನಶೈಲಿ ...
READ MORE