ಲೇಖಕ ಡಾ. ಅನಿಲ್‌ಕುಮಾರ್ ಪಿ. ಗ್ರಾಮಪುರೋಹಿತ ಅವರ ಕವನ ಸಂಕಲನ ಕೃತಿ ʻಹೇಮಂತಗಾನʼ. ಪುಸ್ತಕದ ಮುನ್ನುಡಿಯಲ್ಲಿ ಸಿದ್ದರಾಮಪ್ಪ ಸಿ.ಎಂ. ಅವರು, “ಇಲ್ಲಿನ ಕವನಗಳಲ್ಲಿ ಮಾನವೀಯ ಮೌಲ್ಯಗಳು ಸಾಲು ಸಾಲಿನಲ್ಲಿ ತಮ್ಮ ಇರುವಿಕೆಯನ್ನು ತೋರಿಸುತ್ತವೆ ಎನಿಸುತ್ತದೆ. ಆರಕ್ಷಕನ ನಿರಂತರ ಕರ್ತವ್ಯದ ನಡುವೆ ತಮ್ಮ ಇಷ್ಟವಾದ ಸಾಹಿತ್ಯ ಕೈಂಕರ್ಯವನ್ನು ಪೋಷಿಸುವುದು ಒಂದು ವಿಸ್ಮಯವೆಂದೇ ನಾನು ಭಾವಿಸುತ್ತೇನೆ. ಇಲ್ಲಿನ ಕವಿತೆಗಳು ನನಗನಿಸಿದಂತೆ ಕುವೆಂಪು ಹಾಗೂ ದ.ರಾ. ಬೇಂದ್ರೆಯವರ ಪ್ರಕೃತಿ ಸಂಬಂಧಿತ ಕವಿತೆಗಳಿಂದ ಸ್ಪೂರ್ತಿ ಪಡೆದಿವೆ ಎನಿಸುತ್ತದೆ” ಎಂದು ಹೇಳಿದ್ದಾರೆ.
ಅನಿಲ್ ಕುಮಾರ್ ಪಿ.ಗ್ರಾಮಪುರೋಹಿತ್ ಅವರು ಎಂ.ಎಸ್ಸಿ, ಎಂ.ಫಿಲ್, ಪಿಹೆಚ್ ಡಿ ಪದವೀಧರರು. ಸಾಹಿತ್ಯ ಕೃಷಿಯಲ್ಲಿ ಮೂರು ದಶಕಗಳಿಂದಲೂ ಹೆಚ್ಚು ಕಾಲ ತೊಡಗಿಸಿಕೊಂಡಿದ್ದಾರೆ. ತಮ್ಮ ಪೊಲೀಸ್ ಇಲಾಖೆಯ ಸೇವೆಯೊಂದಿಗೆ ಸಾಹಿತ್ಯದ ಬಗ್ಗೆ ಒಲವನ್ನು ಬೆಳೆಸಿಕೊಂಡಿರುವ ಇವರು ಈಗಾಗಲೇ ಸಂಚಾರ ವಿಭಾಗಕ್ಕೆ ಸಂಬಂಧಿಸಿದಂತೆ ರಸ್ತೆ ಸುರಕ್ಷತೆ, ರಸ್ತೆ ಸುರಕ್ಷಾ ಶತಕ ಪುಸ್ತಕಗಳನ್ನು ರಚಿಸಿದ್ದಾರೆ. ಜೊತೆಗೆ ಜೀಕಬೇಕು, ತುಂತುರು, ಪಟ್ಟಕ ಎಂಬ ಮೂರು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಕೃತಿಗಳು: ಜೀಕಬೇಕು, ತುಂತುರು, ರಸ್ತೆ ಸುರಕ್ಷತೆ, ರಸ್ತೆ ಸುರಕ್ಷಾ ಶತಕ , ಪಟ್ಟಕ , ಮೆಲುಕು, ಭಾವತೋರಣ, ಟ್ರಾಫಿಕ್ ಮ್ಯಾನ್ಯುಯಲ್ (ಅನುವಾದ), Traffic is ...
READ MORE