`ಅವ್ವ ನನ್ಹೆತ್ತು ಮುದ್ದಾಡುವಾಗ' ಕೃತಿಯು ಎಂ. ಜವರಾಜ್ ಅವರ ಕವನ ಸಂಕಲನವಾಗಿದೆ. ಇಲ್ಲಿಯ ಕವಿತೆಗಳು ಕವಿಯ ‘ಅಂತಃಸ್ವತ್ತು’ ಯಾವುದು ಎಂಬುದನ್ನು ಸೂಚಿಸುವಂತಿದೆ. ಸಾಹಿತ್ಯವೆಂಬುದನ್ನು, ಕಾವ್ಯವೆಂಬುದನ್ನು ತಮ್ಮದೇ ಶಕ್ತ ಸಾಲುಗಳನ್ನು ವಿವಿಧ ಜನಪ್ರಿಯ ವೇದಿಕೆಗಳಿಗೆ ಒತ್ತೆ ಇಡುತ್ತಿರುವ ಇಂದಿನ ಅನೇಕ ಲೇಖಕ-ಕವಿಗಳ ಆತ್ಮಸಾಕ್ಷಿಯನ್ನು ಈ ಕವಿತೆ ಕೆಣಕುವಂತಿದೆ. ‘ಅಂತರಂಗ ಶುದ್ಧಿ ಬಹಿರಂಗ ಶುದ್ಧಿ’ ಎಂಬುದನ್ನು ಬಸವಣ್ಣ ‘ನುಡಿ’ಯ ಮೂಲಕ ಈ ಅರ್ಥದಲ್ಲೇ ಬಹಿರಂಗದ, ಅಂದರೆ ಸಮಾಜದ ದನಿಯೂ ಕೂಡ. ಈ ಪ್ರಸ್ತಾಪದ ಹಿನ್ನೆಲೆಯಲ್ಲಿಯೇ ಎಂ. ಜವರಾಜ್ ಅವರ ಕವಿತೆಗಳನ್ನು ನೋಡಬೇಕೆನ್ನಿಸುತ್ತದೆ. ಇವರು ‘ನೀನು ಹೋದ ಮೇಲೆ’, ‘ಆಪೋಶನ’, ‘ವರ್ಷ ವರ್ಷಕ್ಕೂ ಎಲೆಕ್ಷನ್ ಇರುವಾಗ’, ‘ಗ್ರಹಣ’ ಮುಂತಾದ ಕವಿತೆಗಳಲ್ಲಿ ‘ಸಾಮಾನ್ಯ ಭಾವ’ಗಳಲ್ಲಿ ನಿಲ್ಲುತ್ತಾರೆ.
ಲೇಖಕ ಎಂ. ಜವರಾಜ್ ಅವರು ಮೂಲತಃ ಟಿ.ನರಸೀಪುರದವರು. ತಂದೆ ಮಾದಯ್ಯ ತಾಯಿ ತಾಯಮ್ಮ. ಪ್ರಾಥಮಿಕ ಹಂತದಿಂದ ಹಿಡಿದು ಪದವಿ ಹಂತದವರೆಗೂ ಶಿಕ್ಷಣ ಪೂರೈಸಿದ್ದು ಹುಟ್ಟೂರಿನಲ್ಲೇ. ಮೈಸೂರಿನ ಮುಕ್ತ ವಿವಿ ಯಿಂದ ಇತಿಹಾಸದಲ್ಲಿ ಎಂ.ಎ.ಪದವೀಧರರು. ಪ್ರಸ್ತುತ ಮೈಸೂರಿನ ಖಾಸಗಿ ಕಂಪನಿಯೊಂದರಲ್ಲಿ ಸಮಾರು 15 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಕೃತಿಗಳು: ನವೂಲೂರಮ್ಮನ ಕಥೆ (ಕತಾ ಸಂಕಲನ), ಕಿಡಿ (ಕಾದಂಬರಿ) ...
READ MORE