ಮತ್ತೆ ಶ್ರಾವಣಾ

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 80

₹ 45.00




Year of Publication: 2016
Published by: ಶ್ರೀಮಾತಾ ಪ್ರಕಾಶನ
Address: ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003

Synopsys

ಮತ್ತೆ ಬಂತು ಶ್ರಾವಣ ಬಂತು ಇದು ಅಂಬಿಕಾತನಯದತ್ತರ ಕವನ ಸಂಕಲನ. ೧೯೭೩ ರಲ್ಲಿ ಪ್ರಕಟವಾದ ಈ ಸಂಕಲನವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಭಾಗದಲ್ಲಿ ಬೇದ್ರೆಯವರ ಬಾಲ್ಯಕಾಂಡ ಇದೆ. ಇದನ್ನು ಸ್ಮ್ರತಿ, ಚಲನ, ವಲನ, ಚಿತ್ರಮಾಲೆ ಎಂದಿದ್ದಾರೆ. ಸಖಿಗೀತದ ಮಾದರಿಯಲ್ಲಿಯೇ ಬಾಲ್ಯಕಾಂಡವೂ ಇದೆ. ಎರಡನೆಯ ಭಾಗದಲ್ಲಿ ೧೩ ಕವಿತೆಗಳಿವೆ. ಅವೆಲ್ಲವೂ ೧೯೬೬ರ ಜುಲೈನಿಂದ ೬೯ರ ಜನೇವರಿ ನಡುವಿನ ಅವಧಿಯಲ್ಲಿ ರಚಿಸಿದವು. ಸಖಿಗೀತದ ಶ್ರಾವಣದ ವೈಭವದಿಂದ ಪ್ರಾರಂಬಿಸಿ ಶ್ರಾವಣದ ಹಗಲು , ಶ್ರಾವಣ, ಬಂದಿಕಾರ ಶ್ರಾವಣ, ಪ್ರತಿ ವರ್ಷದಂತೆ ಬಂತು ಶ್ರಾವಣ,ಮತ್ತೆ ಶ್ರಾವಣ ಬಂದ,ದಿಂದ ಬಂದಾವು ಸೇರಿದಂತೆ ಬೇದ್ರೆಯವರ ಶ್ರಾವಣ ಪ್ರೀತಿಯ ಬಳ್ಳಿ ಮತ್ತು ಶ್ರಾವಣ ಬಂತು ವರೆಗೆ ಹಬ್ಬಿದೆ. ಬಾಲ್ಯಕಾಂಡ ೪೫೬ ಸಾಲಿನ ಒಂದು ರಚನೆ.೨೪ ಸಾಲಿಗೆ ಒಂದು ಸ್ಮ್ರತಿ ಚಿತ್ರ ಬೇಂದ್ರೆಯವರ ತಾಯಿ ,ತಂದೆ, ಅಜ್ಜಿ, ಬಾಲ್ಯ,ಆಟ-ಪಾಠ,ವಿನೋದ, ಪ್ಲೇಗಿನ ದಿನಮಾನ, ಹಬ್ಬ, ಗೆಳೆತನ,ಪುಣೆಯ ವಾಸ, ಬೇಂದ್ರೆಯವರ ಒಲವು, ಸಾಹಿತ್ಯ,ಪ್ರೀತಿ, ಇವೆಲ್ಲ ಕೂಡಿದ ೧೯ ಸ್ಮ್ರತಿ ಚಿತ್ರಗಳಿವೆ. ಈ ಸಂಕಲನದ ಎರಡನೆಯ ಭಾಗದಲ್ಲಿ ೧೩ ಕವನಗಳು ಬೇಂದ್ರೆಯವರ ಪತ್ನಿಗೆ ಸಂಬಂದಿಸಿದವುಗಳು. ಪತ್ನಿ ಮರಣಶ್ಯಯ್ಯಿಯಲ್ಲಿರುವಾಗ ಅಥವಾ ಅವಳ ಮರಣೊತ್ತರ ಪತಿ ಮಾಡಿದ ಪ್ರಣಯ ಆರಾಧನೆಯ ಗೀತೆಗಳಿವೆ. ಬೇಂದ್ರೆಯವರಿಗೆ ಶ್ರಾವಣ ಮಾಸ ಬಂದಾಗೊಮ್ಮೆ ಪೂರ್ವಜರ ನೆನಪು, ಪ್ರಣಯ ಚಿಂತೆ, ದುಃಖ, ಆನಂದ, ಮೊದಲಾದ ನೆನಪಾಗುವುದು ಸಹಜ.ಈ ಎಲ್ಲವುಗಳಿಂದ ಪಾರಾಗಲು ಷಡ್ ಗುಣೈಶ್ವರ್ಯ ಶಾಂತಿ, ಭಗವಂತನೇ ಕಾರಣ ಎಂಬುದು ಅವರ ಶ್ರದ್ದೆ.ಅವನ್ನು ನಾವು ಮರೆಯಬಾರದು, ಅವನ ಭಜನೆ ಸತತ ಮಾಡಬೇಕು ಎಂಬುದು ಅವರ ಅರಿವು ಎಂದಿದ್ದಾರೆ ವಾಮನ್ ಬೇಂದ್ರೆ. “ನನ್ನ ಹಂಬಲಿನ ಹಂಬಿಗೆ ಹಂದರ ನೀನು ನನ್ನ ಬೆಂಬಲದ ನಂಬಿಗೆಯ ಮಂದಿರ ನೀನು ನೀನೇ ನನ್ನ ಆಶೆ, ನಿರಾಶೆಗಳ ಗಾಳಿ ಗೋಪುರ ದಶಾವತಾರ, ಅರ್ಧೆನಾರೀ ನಟೇಶ್ವರ, ಪುರಂದರ ವಿಠ್ಠಲ.”

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books