ಡಾ. ಎಂ.ಜಿ. ದೇಶಪಾಂಡೆ ಅವರ ಹನಿಗವನಗಳ ಸಂಕಲನ-ಝೇಂಕಾರ. ಇಲ್ಲಿಯ ಹನಿಗವನಗಳು ಮನಸ್ಸಿಗೆ ಮುದ ನೀಡುತ್ತವೆ . ಸಾಕು ಎಂಬ ಹನಿಗವಿತೆಯಲ್ಲಿ `ಸ್ನೇಹಕ್ಕೆ ಇನಿತು ಆತ್ಮೀಯತೆ ನೇಹಕ್ಕೆ ಇನಿತು ಪ್ರೀತಿ ಸಾಕು. ಇನ್ನೊಂದು.. ‘ಎಂದು’ ಎಂಬ ಪುಟ್ಟ ಕವಿತೆಯಲ್ಲಿ `ಸ್ವಾತಂತ್ರ್ಯದ ನೆರಳಿನಲ್ಲಿ ಅಮಾನುಷ ಕೃತ್ಯಗಳಿಗೆ ಕಡಿವಾಣ ಎಂದು ?' , ನಾವು ನೋವು ಎಂಬ ಕವಿತೆಯಲ್ಲಿ `ಬಾಳಿನಲ್ಲಿ ಆತ್ಮೀಯತೆಯಲ್ಲಿ ಬೆರೆತಾಗ ನಾವು ಮರೆಯ ಬಲ್ಲೆವು ನೋವು' ಹೀಗೆ ಹಲವು ಹನಿಗವನಗಳು ಉತ್ತಮವಾಗಿವೆ .ಓದುಗರನ್ನು ಆಕರ್ಷಿಸುತ್ತವೆ ಎಂದು ಕವಿಗಳು ಅಭಿಪ್ರಾಯಪಟ್ಟಿದ್ದಾರೆ.
ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು. ಇವರ ಕಾವ್ಯನಾಮ ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ. ಕೊರೊನಾ ವೈರಸ್ ಪರಿಣಾಮ ಲಾಕ್ ...
READ MORE