ಗೀತಯೋಗಿ ಕಾವ್ಯನಾಮದ ಸೋಮನಾಥ ಎಂ ದೊಡ್ಡಿ ಅವರ 2ನೇ ಕವನ ಸಂಕಲನ- ’ಗಂಧದೌತಣ’. ಪುರಾಣದ ಸೋಗಿನಲ್ಲಿರುವ ಚರಿತ್ರೆಯನ್ನು ಆಧುನಿಕರಣಕ್ಕೆ ಬಗ್ಗಿಸುವ ಹಾಗೂ ಒಗ್ಗಿಸುವ ವಿಷಯವಸ್ತುವೇ ಇಲ್ಲಿಯ ಬಹುತೇಕ ಕವನಗಳ ಅಂಶಗಳಾಗಿವೆ ಎಂದು ಸ್ವತಃ ಕವಿಗಳೇ ವಿಶ್ಲೇಷಿಸುತ್ತಾರೆ. ಕವಿತೆಗಳು ಸರಳವಾಗಿ ಓದುಗರ ಗಮನ ಸೆಳೆಯುತ್ತವೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದ ಗೀತಯೋಗಿ (ಸೋಮನಾಥ ಎಂ. ದೊಡ್ಡಿ) ಶಿಕ್ಷಣದಲ್ಲಿ ಎಂ.ಫಿಲ್ ಪದವೀಧರರು. ತಂದೆ ಮಲ್ಲಿಕಾರ್ಜುನ, ತಾಯಿ: ರುಕ್ಮಿಣಿ. ಮೈಸೂರಿನ ಮಾನಸಗಂಗೋತ್ರಿಯಿಂದ ಸ್ನಾತಕೋತ್ತರ ಪದವಿ ಪಡೆದ ನಂತರ ಅವರು ಇಂಡಿ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಐತಿಹಾಸಿಕ ತಾಣಗಳ ವೀಕ್ಷಣೆ ಹಾಗೂ ಅಧ್ಯಯನ ಇವರ ಹವ್ಯಾಸ. ಈಗಾಗಲೇ ’ಪದಗಳ ಕದ ಹಾಗೂ ’ಗಂಧದೌತಣ’ ಈ ಎರಡೂ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ...
READ MORE