ಅಲೆಯೊಳಗಿನ ಮೌನ

Author : ಶ್ರೀದೇವಿ ಕೆರೆಮನೆ

Pages 72

₹ 80.00




Year of Publication: 2018
Published by: ಕ್ರಾಂತಿ ಪ್ರಕಾಶನ
Address: ಕ್ರಾಂತಿ ಪ್ರಕಾಶನ, ಹೊಸ ಯಲ್ಲಾಪುರ, ಧಾರವಾಡ
Phone: 9844490786

Synopsys

ಉರ್ದು ಸಾಹಿತ್ಯದಲ್ಲಿ ಖ್ಯಾತವಾಗಿರುವ ಗಜಲ್ ಸಾಹಿತ್ಯ ಪ್ರಕಾರವು ಈಗ ಕನ್ನಡದಲ್ಲೂ ಬಂದಿದೆ. ಶ್ರೀದೇವಿ ಕೆರೆಮನೆ ಅವರು ರಚಿಸಿದ ಈ ಈ ಕೃತಿಯಲ್ಲಿರುವ 71 ಗಜಲ್‌ಗಳು ನಮಗೆ ಆಳವಾದ ಅರ್ಥವನ್ನು ನೀಡುತ್ತದೆ. ಪುರುಷ ಪ್ರಧಾನ ವ್ಯವಸ್ಥೆ, ಗಂಡಸಿನ ಅಹಂಕಾರ ಮಾತು, ಹೆಣ್ಣಿನ ಮನದ ಮೃದುತ್ವ ಹೀಗೆ ಪ್ರಮುಖ ವಿಷಯಗಳ ಕುರಿತು ಇಲ್ಲಿರುವ ಗಜಲ್‌ಗಳು ಬೆಳಕುಚೆಲ್ಲಿದೆ.

ಈ ಗಜಲ್ ಗಳನ್ನು ಕುರಿತು ಸಿದ್ದರಾಮ ಹಿರೇಮಠ, ಕೂಡ್ಲಿಗಿ ಅವರು ’ಶ್ರೀದೇವಿಯವರು 'ಜಗದ ಕಟ್ಟಳೆಯನ್ನೆಲ್ಲ ಕಿತ್ತಳೆದು ಒಂದಾಗಲು ನನ್ನೆಡೆಗೆ ನೀ ಎಲ್ಲಿದ್ದರೂ ಬಂದುಬಿಡು' ಎನ್ನುವ ಎಲ್ಲ ರೀತಿಯ ಬಂಧನದ ಹಂಗನ್ನು ತೊರೆಯುವುದರ ಜೊತೆಯಲ್ಲಿಯೇ 'ಬರೆದ ಯಾವ ಸಾಲೂ ಶತಮಾನದ ಅವಮಾನಗಳನು ಕೊನೆಗೊಳಿಸಿದ ಮೇಲೆ ಸಿರಿ, ಹೀಗೆ ಗಜಲ್ ಬರೆವುದರ ಅರ್ಥವೇನಿದೆ?' ಎಂದೂ ವಿಷಾದ ಹಾಗೂ ನೋವಿನ ಕುಂಚದಲ್ಲಿ ಅದ್ದಿ ಗಜಲ್‌ನ್ನು ಚಿತ್ರಿಸುತ್ತಾರೆ. 'ಕಂಡರೆಷ್ಟು, ಎಂದರೆಷ್ಟು ಆಯಸ್ಸು ಮುಗಿದ ಮೇಲೆ ಕಣ ಕಾಲವೂ ಕಾಯದ, ಇಹದ ಹಂಗು ತೊರೆಯಬೇಕ?” ಎಂದು ಬದುಕಿನ ನಶ್ವರತೆಯ ಬಗ್ಗೆ ಹೇಳುತ್ತಲೇ 'ಮೂಲೆ ಕೋಣೆಯ ಕಿಲುಬು ಹಿಡಿದ ಜೋಡಿ ಮಂಚವ ಹೊರತರಬೇಕಿದೆ ಮಿಂಚು ಹುಳುಗಳ ಮಿಂಚಿನ ಬೆಳಕಲ್ಲಿ ಸಿರಿ' ಸುಖವ ಆಸ್ವಾದಿಸಬೇಕಿದೆ” ಎಂಬ ನವಿರು ಭಾವದ ಉನ್ಮತ್ತತೆಯನ್ನೂ ಗಜಲ್‌ನಲ್ಲಿ ಬಿಂಬಿಸುತ್ತಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

-

About the Author

ಶ್ರೀದೇವಿ ಕೆರೆಮನೆ

ಉತ್ತರ ಕನ್ನಡ ಜಿಲ್ಲೆ  ಹಿರೇಗುತ್ತಿ ಮೂಲದ  ಶ್ರೀದೇವಿ ಕೆರೆಮನೆ ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕಿ. ಸಾಹಿತ್ಯ ರಚನೆ ಹವ್ಯಾಸ. ಮೊದಲ ಕವನ ಸಂಕಲನ ’ನಾನು ಗೆಲ್ಲುತ್ತೇನೆ’. ಬಳಿಕ ’ಗೆಜ್ಜೆ ಕಟ್ಟದ ಕಾಲಲ್ಲಿ’,’ಮೌನದ ಮಹಾ ಕೋಟೆಯೊಳಗೆ’, ’ಮೈ ಮುಚ್ಚಲೊಂದು ತುಮಡು ಬಟ್ಟೆ’, ಕೃತಿಗಳು ಬಂದವು. ಅಂಗೈಯೊಳಗಿನ ಬೆಳಕು(ವಿಮರ್ಶಾ ಸಂಕಲನ), ’ಅಲೆಯೊಳಗಿನ ಮೌನ’, ’ನನ್ನ ದನಿಗೆ ನಿನ್ನ ದನಿಯು’ ಗಜಲ್‌ ಕೃತಿ. ’ಬೈಟೂ’ ಚಹಾ ಕುರಿತ ಸಂಕಲನವಾದರೆ ಬಿಕ್ಕೆಹಣ್ಣು, ಚಿತ್ತ ಚಿತ್ತಾರ ಅವರ ಕತೆಗಳ ಗುಚ್ಛ. ಗೂಡು ಕಟ್ಟುವ ಸಂಭ್ರಮದಲ್ಲಿ (ಪ್ರಬಂಧ ಬರಹ ಸಂಕಲನ). ’ಪ್ರೀತಿ ಎಂದರೆ ಇದೇನಾ?, ಹೆಣ್ತನದ ಆಚೆ ...

READ MORE

Related Books