“‘ಅಕ್ವೇರಿಯಮ್ ಮೀನು’ ಮಲ್ಲಿಕಾರ್ಜುನ ಹಿರೇಮಠ ಅವರ ಮೊದಲ ಕವನ ಸಂಕಲನ. ಲೇಖಕರು ಜಾರಿಬಿದ್ದ ಪ್ರಸಂಗಗಳಲ್ಲಿ ಎತ್ತಿ ಹಿಡಿಯುವ ಊರುಗೋಲಾಗಿ ದೌರ್ಬಲ್ಯಗಳೆಲ್ಲ ರಕ್ಷಣೆಯಾಗಿ ಬಂದರೆ, ಕೆಲವರಿಗೆ ಮೊದಲ ಪ್ರಯತ್ನದಲ್ಲಿ ಇಷ್ಟು ಚೆನ್ನಾಗಿ ಬರೆದಿದ್ದಾರಲ್ಲ ಎನ್ನುವ ವಿಸ್ಮಯವಾಗಿ ಬರಹಗಾರನಿಗೆ ಅದು ಅಪೂರ್ವ ಕ್ವಾಲಿಫಿಕೇಶನಾಗಿ ಬರುತ್ತದೆ. ಮಲ್ಲಿಕಾರ್ಜುನ ಹಿರೇಮಠರು ಎರಡನೆಯ ಗುಂಪಿಗೆ ಸೇರಿದವರು. ಸಣ್ಣ ಸಣ್ಣ ಕವಿತೆಗಳು, ಸಣ್ಣ ಸಣ್ಣ ಸಾಲುಗಳು; ಸಣ್ಣ ಸಣ್ಣ ಶಬ್ದಗಳು ಆದರೆ ಸಾಸಿವೆಯೊಳಗೆ ಕುಂಬಳ ಬಿಂಬಿಸುವಂಥ ಆರ್ಥ ವಿಸ್ತಾರ” ಎಂದು ಕೃತಿಯ ಕುರಿತ ಶ್ಲಾಘಿಸಿದ್ದಾರೆ ಬನ್ನಂಜೆ ಗೋವಿಂದಾಚಾರ್ಯರು.
ಲೇಖಕ ಮಲ್ಲಿಕಾರ್ಜುನ ಹಿರೇಮಠ ಅವರದ್ದು ವಿವೇಚನಾಪೂರ್ಣ ಸಾಹಿತ್ಯ ಮತ್ತು ವ್ಯಕ್ತಿತ್ವ. ಹುಟ್ಟಿದ್ದು ಕೊಪ್ಪಳ ಜಿಲ್ಲೆಯ ಬಿಸರಹಳ್ಳಿ 1946 ಜೂನ್ 05ರಂದು. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸದ್ಯ ನಿವೃತ್ತರಾಗಿದ್ದಾರೆ. 'ಆಕ್ವೇರಿಯಂ ಮೀನು' ಅವರ ಮೊದಲ ಕವನ ಸಂಕಲನ 1974ರಲ್ಲಿ ಪ್ರಕಟವಾಯಿತು. ‘ಅಮೀನಪುರದ ಸಂತೆ, ಜ್ಞಾನೇಶ್ವರನ ನಾಡಿನಲ್ಲಿ (ಪ್ರವಾಸ ಕಥನ), ಅಂತರ್ಗತ (ವಿಮರ್ಶೆ), ಅಭಿಮುಖ (ವಿಮರ್ಶೆ), ಹವನ (ಕಾದಂಬರಿ), 'ಮೊಲೆವಾಲು ನಂಜಾಗಿ' (ಕತಾ ಸಂಕಲನ), ಮೂರುಸಂಜೆ ಮುಂದ ಧಾರವಾಡ (ಲಲಿತ ಪ್ರಬಂಧಗಳು), ಗಿರಡ್ಡಿ ಗೋವಿಂದರಾಜ : ವ್ಯಕ್ತಿ-ಆಭಿವ್ಯಕ್ತಿ (ವಿಮರ್ಶೆ)’ ಅವರ ಪ್ರಮುಖ ಕೃತಿಗಳು. ಅವರ ಸಾಹಿತ್ಯ ಸೇವೆಗೆ ‘ಕನಾಟಕ ...
READ MORE