ಆ ದಾರಿ

Author : ಜಯಸುದರ್ಶನ

Pages 64

₹ 18.00




Year of Publication: 1991
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಅಗಾಧವಾದ ಆತ್ಮವಿಶ್ವಾಸದಿಂದ, ಉಕ್ಕಟವಾದ ಒಳಮುಖೀ ಶೋಧನೆಯು ‘ಆ ದಾರಿ’ ಕಾವ್ಯದ ತುಂಬಾ ಹರಡಿಕೊಂಡಿದೆ. ಪ್ರಸ್ತುತ ಕವನ ಸಂಕಲನದಲ್ಲಿ ಜಯಸುದರ್ಶನರು ಕವನದಿಂದ ಕವನಕ್ಕೆ ವಿಶಿಷ್ಟವಾದ ಹಲವು ಹೊರ ‘ಆವರಣ’ಗಳನ್ನು ಸೃಷ್ಟಿಸುವಂತೆ, ಒಳ ‘ಆವರಣ’ಗಳನ್ನೂ ಸೃಷ್ಟಿಸುತ್ತಾರೆ. ಅಂತಃಕರಣದ ಶುಭ್ರತೆಯನ್ನು ಉಳಿಸಿಕೊಂಡೇ ಪರಿಪೂರ್ಣದೆಡೆಗೆ ಸಾಗುವ ಕಾವ್ಯದ ಕ್ರಮ ‘ಆ ದಾರಿ’ಯ ಸಂಕಲನದ ಬಹುಪಾಲು ಕವಿತೆಗಳ ಆಶಯವಾಗಿದೆ.

About the Author

ಜಯಸುದರ್ಶನ
(10 April 1948 - 15 October 2000)

ಜಯಸುದರ್ಶನ ಎಂತಲೇ ಪರಿಚಿತರಾಗಿರುವ ಜಿ.ಎಸ್.ಶಿವಪ್ರಕಾಶ್ ಅವರು 1948 ಏಪ್ರಿಲ್‌ 10ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಸೀತಾರಾಮ ಶಾಸ್ತ್ರಿ, ತಾಯಿ ಚೆನ್ನಮ್ಮ. ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದ ಇವರು ‘ಬರೆದೆ ಇಲ್ಲದ್ದು’  ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇನ್ನಾದರೂ ಬದುಕಬೇಕು ಎಂಬ ಕವನ ಸಂಕಲನ ಬರೆದಿದ್ದು, ಇಂಗ್ಲಿಷಿನಲ್ಲಿಯೂ ಕೃತಿಗಳನ್ನು ರಚಿಸಿದ್ದಾರೆ.  2000 ಅಕ್ಟೋಬರ್‌ 15 ಜಯಸುದರ್ಶನ ಅವರು ನಿಧನರಾದರು. ...

READ MORE

Related Books