ಕವಿ ವೈಲೇಶ್ ಪಿ. ಎಸ್ ಅವರ ’ ಕಣ್ಮರೆಯಾದ ಹಳ್ಳಿ’ ಕೃತಿಯು ಕವನಸಂಕಲನವಾಗಿದೆ. ಇಲ್ಲಿರುವ ಕವಿತೆಗಳು ವ್ಯಕ್ತಿತ್ವದ ಪರಿಚಯವನ್ನು ಮಾಡುತ್ತದೆ. ಹಳ್ಳಿಯ ಜನರ ಜೀವನವನ್ನು ಕವನದಲ್ಲಿ ಕಟ್ಟಿಕೊಟ್ಟಿರುವ ರೀತಿ ಇಲ್ಲಿ ಭಿನ್ನವಾಗಿ ಮೂಡಿಬಂದಿದೆ. ಕೆಲವೊಂದು ಕವಿತೆಗಳು ಹೀಗಿವೆ: ಅಪ್ಪನು ಮಾಡಿಲ್ಲ ಅಪರಿಮಿತ ಆಸ್ತಿ ಪಗಾರವಲ್ಲದೆ ಬೇರೆ ಆದಾಯ ನಾಸ್ತಿ ಹೊಂದಿಕೊಂಡು ಬಾಳಬೇಕಾದ ಸ್ಥಿತಿಗತಿ ಹೀಗಿದ್ದರೂ ಮನೆ ಮಾಡಲೇ ಬೇಕೆಂಬ ಮತಿ ಈ ಕವನದ ಸಾಲುಗಳು ಬದುಕಿನ ನೈಜ್ಯತೆಯನ್ನು ಕಟ್ಟಿಕೊಡುತ್ತವೆ. ಕವಿ ಮನದಲ್ಲಿರುವ ಗ್ರಾಮೀಣ ಪ್ರೀತಿಯ ಕೆಳಗಿನ ಕವಿತೆಯೊಳಗೆ ಮಿತವಾಗಿದೆ. ಹಳ್ಳಿಯ ಕಾರು ಎಂದರೆ ಜೋಡೆತ್ತಿನ ಗಾಡಿ ಹಳ್ಳಿಕಾರ್ ಎತ್ತಿನ ಜೊತೆ ಹೊಲದೊಳ್ ನಡಿ ದೇಸಿ ಹಸುವಿನ ಅಮೃತದಂತಹ ಹಾಲು ಕುಡಿ ಇದ್ದರೆ ಮುದ್ದೆ ಇಲ್ಲದಿದ್ದರೆ ಸೊಪ್ಪು ಸದೆ ಜಡಿ ಊರವರೆಲ್ಲರೂ ನಮಗೆ ಸಹೋದರ ಒಡನಾಡಿ ಹೀಗೆ ಕವಿ ಕವಿತೆಯೊಂದಿಗೆ ಮಾತನಾಡುತ್ತಾ ಭಿನ್ನ ಭಿನ್ನ ವಸ್ತುಗಳನ್ನು ಆಯ್ದು ಕವನ ರಚನೆಯ ಕೌಶಲ್ಯ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಲೇಖಕ ವೈಲೇಶ್ ಪಿ. ಎಸ್ ಅವರು ಮೂಲತಃ ಕೊಡಗಿನವರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರಾಗಿದ್ದಾರೆ. ಕೃತಿಗಳು: ಅಮ್ಮ ನಿನಗಾಗಿ (2018) , ಕಣ್ಮರೆಯಾದ ಹಳ್ಳಿ(2020), ಬೊಮ್ಮಲಿಂಗನ ಸಗ್ಗ(2021) (ಕವನಸಂಕಲನ) ...
READ MORE