‘ಕಾವ್ಯ ಚಂದ್ರಿ’ ಕೃತಿಯು ರೇಣುಕಾ ಶಿವಕುಮಾರ ಅವರ ಕವನಸಂಕಲನವಾಗಿದೆ. ಈ ಕೃತಿಯು ಭಾವ ಭಾಷೆಗಳ ಬೆಸುಗೆಯ ಬಂಧದ ಕುರಿತು ಮಾತನಾಡುತ್ತದೆ. ಕವನಗಳಲ್ಲಿ ಭಾವದ ಕಾವು ಹಾಸು ಹೊಕ್ಕಾಗಿದೆ. ರಸ ಒಸರುವ ಚೈತ್ಯಾಂಶಸಂಭೂತ ಕವನ ಇದಾಗಿದೆ. ಇಲ್ಲಿ ಕವನಗಳ ವಸ್ತುಗಳೆಂದರೆ ಪ್ರೀತಿ ಮತ್ತು ಪ್ರಕೃತಿ, ಪ್ರೇಮ ಹಾಗೂ ಪ್ರಣಯ, ನದಿಜಲ, ಮಾತೃಹೃದಯ, ಪಿತೃವಾಕ್ಯ ಪರಿಪಾಲನೆ, ಖಗಮೃಗಗಳು. ಅಷ್ಟೇ ಅಲ್ಲದೆ ಜೀವನಮೌಲ್ಯಗಳಾದ, ಮಾನವೀಯ ಸಂಬಂಧ, ಪ್ರಾಮಾಣಿಕತೆ ಪರೋಪಕಾರ, ಸದ್ಗುಣಗಳು ಕವನಗಳಲ್ಲಿ ಮನೋಜ್ಞವಾಗಿ ಮೂಡಿ ಬಂದಿವೆ. ಕವಿತೆಗಳಲ್ಲಿ ವಸ್ತುನಿಷ್ಠತೆ ಎದ್ದು ಕಾಣುತ್ತದೆ.
ರೇಣುಕಾ ಶಿವಕುಮಾರ ಅವರ ಆಸಕ್ತಿ ಕ್ಷೇತ್ರ ಸಾಹಿತ್ಯ. 1984 ಮಾ‘ಕಾವ್ಯ ಚಂದ್ರಿ’ ಅವರ ಚೊಚ್ಚಲ ಕವನಸಂಕಲನ. ಬರಹ, ಕಾದಂಬರಿ ಹಾಗೂ ಆಧ್ಯಾತ್ಮಿಕ ಗ್ರಂಥಗಳನ್ನು ಓದುವುದು, ಕವನ, ಹಾಗೂ ಚುಟುಕು, ಲೇಖನ, ಕಥೆ ಬರೆಯುವುದು, ಹಾಡುವುದು ಅವರ ಹವ್ಯಾಸ. ...
READ MORE