ಲೇಖಕ, ಕವಿ ಎಂ.ವಿ. ಶಶಿಭೂಷಣ ರಾಜು ಅವರ ಕವನ ಸಂಕಲನ ದ್ವಂದ್ವ. ಜೀವನದ ಗಾಢ ಅನುಭವಗಳು, ಜೀವನ ತತ್ವ, ಸಮಾನತೆ, ಮನಸಿನ ತಹತಹ ಗಳು ಹಾಗು ಬಾಳ ಚಿಂತನೆ ಇವರ ಕಥೆ ಮತ್ತು ಕವನಗಳ ವಸ್ತು. ಕೃತಿಯಲ್ಲಿ ಲೇಖಕರೇ ಹೇಳಿರುವಂತೆ, ದ್ವಂದ್ವ ಮನಸಿನ ಭೀತಿಗೆ ಮಾನವ ಅನಾದಿ ಕಾಲದಿಂದಲೂ ಬಲಿಯಾಗುತ್ತಲೇ ಇದ್ದಾನೆ. ಎಲ್ಲಾ ಇದ್ದರೂ ಏನೂ ಇಲ್ಲದಂತೆ, ಏನೂ ಇಲ್ಲದಿದ್ದರೂ ಏನೋ ಇರುವಂತೆ ಭಾವಿಸುವ ಮನಸ್ಸಿಗೆ ಕಡಿವಾಣ ಹಾಕಲು ಮಾನವ ತನ್ನದೇ ಆದ ಮಾರ್ಗಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಲೇ ಇದ್ದಾನೆ. ಯಾರು, ಎಲ್ಲಿ, ಹೇಗೆ ಸಫಲರಾಗಿದ್ದಾರೆ ಎಂಬುದು ಎಲ್ಲೂ ಕಾಣಸಿಗದು. ದ್ವಂದ್ವಗಳು ನನ್ನನ್ನು ತುಸು ಹೆಚ್ಚೇ ಕಾಡುತ್ತಿದ್ದವು (ಈಗಲೂ ಕಾಡುತ್ತಿವೆ). ಈ ದ್ವಂದ್ವ ಚಿಂತನೆಯಲ್ಲಿ ಹುಟ್ಟಿ ಬಂದಿದ್ದು ನನ್ನ ಸಾಹಿತ್ಯ. ಜೀವನ, ಜೀವನದ ಗೊಂದಲಗಳು, ಗ್ರಹಿಕೆಗಳು, ಕಲ್ಪನೆಗಳು, ಭ್ರಮೆಗಳು ಮತ್ತು ಎಲ್ಲರನ್ನೂ, ಎಲ್ಲವನ್ನೂ ಸಮನಾಗಿಸುವ ಸಾವಿನ ಬಗ್ಗೆ ಹೆಚ್ಚು ಯೋಚಿಸುವ ನಾನು ನನ್ನದೇ ಜೀವನತತ್ವ ಒಂದನ್ನು ಅಳವಡಿಸಿಕೊಳ್ಳಲು ಹೆಣಗಾಡುತ್ತಿದ್ದೇನೆ ಎಂದಿದ್ದಾರೆ.
ಲೇಖಕ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲಿ ಪ್ರಕಟವಾಗಿವೆ. ಅಮೆರಿಕಾದ ಸಾಹಿತ್ಯಘೋಷ್ಠಿಗಳಲ್ಲಿಯೂ ಭಾಗಿಯಾಗುತ್ತಾರೆ. ಕೃತಿಗಳು: ಮೌನದ ಮೊರೆಹೊಕ್ಕಾಗ, ಕಥನ ಕವನ, ದ್ವಂದ್ವ, ಮತ್ತು ನೆನಪುಗಳೇ ಹಾಗೆ. ಐ ಸೀ ಯು ಗಾಡ್, ಲೈಫ್ ಅಂಡ್ ಡೆತ್, ಇಮಿಗ್ರೇಷನ್ ದಿ ಪೈನ್, ಲಾಸ್ಟ್ ಲೈಫ್, ...
READ MORE