ರುಚಿಗೆ ತಕ್ಕಷ್ಟು ಪ್ರೀತಿ

Author : ನವೀನ್ ಮಧುಗಿರಿ

Pages 84

₹ 75.00




Year of Publication: 2016
Published by: ವಿನಯ ಪ್ರಕಾಶನ
Address: ಮಧುಗಿರಿ ತಾಲ್ಲೂಕು ತುಮಕೂರು ಜಿಲ್ಲೆ
Phone: 8951124493

Synopsys

‘ರುಚಿಗೆ ತಕ್ಕಷ್ಟು ಪ್ರೀತಿ’ ಕೃತಿಯು ನವೀನ್ ಮಧುಗಿರಿ ಅವರ ಕವನ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಜಯಶ್ರೀ ಬಿ. ಕದ್ರಿ ಅವರು, `ಎಳೆಯ ವಯಸ್ಸಿನಲ್ಲಿಯೇ ವೈವಿಧ್ಯಮಯ ಜೀವನಾನುಭವಗಳನ್ನು ಪಡೆದ ನವೀನ್ ಯಾವುದೇ ಕಹಿಯಿರದೆ ತನ್ನ ಅನುಭವಗಳನ್ನು ಒಂದು ರೀತಿಯ ಸೌಜನ್ಯದಿಂದಲೇ ಅಕ್ಷರ ರೂಪಕ್ಕಿಳಿಸುತ್ತಾರೆ. ಈಗಿನ ಹೆಚ್ಚಿನ ಯುವ ಕವಿಗಳಿಗಿರುವಂತೆ ಅವರಿಗೂ ವ್ಯವಸ್ಥೆಯ ಬಗ್ಗೆ ರೊಚ್ಚು, ಆಕ್ರೋಶಗಳಿದ್ದರೂ ವಾಸ್ತವವನ್ನು ತನ್ನದೇ ರೀತಿಯಲ್ಲಿ ಎದುರಿಸುವ ಧನಾತ್ಮಕ ಚಿಂತನೆಯೂ ಇಲ್ಲಿದೆ. ಬಡತನ, ತಮ್ಮ ತಂದೆ ತಾಯಿಯರು ತಮ್ಮನ್ನು ಪೊರೆದ ಬಗ್ಗೆ ಅಭಿಮಾನ ಇಲ್ಲಿನ ಮರುಕಳಿಸುವ ಅಂಶಗಳು. ಕೆಲವೊಮ್ಮೆ ಘಟನೆ ಅಂತಃಕರಣ ಕಲಕಿ ಬಿಡುವ ಸಾಲುಗಳೂ ಇಲ್ಲಿವೆ. ಉದಾಹರಣೆಗೆ, “ನಿನ್ನುಸಿರನೂದಿ ನಮ್ಮ ಹಸಿವಿಗೆ ಅನ್ನ ಕುದಿಸಿದೆ. ಬಟ್ಟೆ ತುಂಬಿದ ನಮಗೆ ನಿನ್ನ ಹಸಿವು ಕಾಣಲಿಲ್ಲ” ಈ ರೀತಿಯ ಸಾಲುಗಳಿವೆ. ರಾಬರ್ಟ್ ಬರ್ನ್ಸ್‌ನ ‘ಲಾಸ್ಟ್ ರೈಡ್ ಟುಗೆದರ್’ ನೆನಪಿಸುವ ‘ಕೊನೆಯ ಭೇಟಿ’ಯ ‘ಅಂಟಿಕೊಂಡಿರುವ ಆತ್ಮಗಳ ಹರಿದುಕೊಳ್ಳಬೇಕು” ಸಾಲುಗಳು ಪ್ರೇಮಿಗಳ ನಿಸ್ಸಹಾಯಕತೆಯನ್ನು ಅನಿವಾರ್ಯ ಅಗಲುವಿಕೆಯನ್ನು ಅತಿ ಸಮರ್ಥವಾಗಿ ಬಣ್ಣಿಸುತ್ತವೆ. ಬಾಲ ಕಾರ್ಮಿಕ ಸಮಸ್ಯೆ, ಜಗತ್ತಿನಲ್ಲಿನ ಯುದ್ದ ರೈತನ ಸ್ವಾಭಿಮಾನ ಇವೆಲ್ಲ ಕವಿಯನ್ನು ಹೆಚ್ಚಾಗಿ ಕಾಡಿದ ಅಂಶಗಳು. ನವೀನ್ ಅವರಿಗೆ ರೈತಾಪಿ ಬದುಕಿನ ನೇರ ಅನುಭವ ಇರುವುದರಿಂದ ಅವರ ಬರಹಗಳಿಗೆಲ್ಲ ಆ ಅಥೆಂಟಿಸಿಟಿ ಇದೆ. ಉದಾಹರಣೆಗೆ ‘ದೇಶದ ಮಗ’ ಕವಿತೆಯಲ್ಲಿ ಬರೆದ ‘ಬಿರುಕು ಬಿಟ್ಟ ಪಾದ ಸವೆದ ಹರಕು ಚಪ್ಪಲಿ’ ಅಪ್ಪನ ಹಾದಿ ತುಂಬಾ ಬರಿ ಕಲ್ಲು, ಮಣ್ಣು ಮುಳ್ಳು’ ಇಡೀ ದೇಶದ ರೈತರ ಬವಣೆಯ ಪ್ರತೀಕ. ಇನ್ನು ಭಾಷೆ, ಶೈಲಿಯ ದೃಷ್ಟಿಯಿಂದ ಹೇಳುವುದಿದ್ದರೆ ಕೆಲವೊಮ್ಮೆ ಸರಳವಾಗಿ, ಸುಸಂಸ್ಕೃತವಾಗಿರುವ ಇವರ ಭಾಷೆ, ಆಗೊಮ್ಮೆ ಈಗೊಮ್ಮೆ ವಾಚ್ಯವಾಗಿ ಬಿಡುತ್ತದೆ. ಹಾಗಿದ್ದರೂ, ಭರವಸೆ ಹುಟ್ಟಿಸುವಂತೆ ಧ್ಯಾನ, ‘ಸ್ವರ್ಗ’ ಕವಿತೆಗಳಲ್ಲಿ ರಚಿಸಬಲ್ಲದು. ಸಾಹಿತ್ಯದ ಹೆಚ್ಚಿನ ಓದು ಹಾಗೂ ಜೀವನಾನುಭವಗಳಿಗೆ ಪಕ್ವವಾದಂತೆ ಇವರು ಹೆಚ್ಚಿನ ಮೌಲ್ಯದ ಸಾಹಿತ್ಯ ಕೃತಿಗಳನ್ನು ರಚಿಸುವದರಲ್ಲಿ ಯಾವುದೇ ಸಂಶಯವಿಲ್ಲ’  ಎಂದಿದ್ದಾರೆ.

About the Author

ನವೀನ್ ಮಧುಗಿರಿ

ನವೀನ್ ಮಧುಗಿರಿ ಅವರ ಮೂಲನಾಮ ರಘುನಂದನ್ . ವಿ. ಆರ್. ವೃತ್ತಿಯಿಂದ ಕೃಷಿಕರು. ಸಾಹಿತ್ಯ ರಚನೆಯಲ್ಲಿ ಆಸಕ್ತಿ. ಅವರ ಕತೆ, ಕವಿತೆ, ಶಿಶುಗೀತೆ, ಲೇಖನಗಳು ರಾಜ್ಯದ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕೃತಿಗಳು : ರುಚಿಗೆ ತಕ್ಕಷ್ಟು ಪ್ರೀತಿ, ಚಿಟ್ಟೆ ರೆಕ್ಕೆ, ನವಿಗವನ ...

READ MORE

Related Books