‘ಮಾತು ಕೊಂದ ಭಾರತ’ ಕವಿ ಸುರೇಶ್ ಗೌತಮ ಅವರ ಕವನಸಂಕಲನ. ಓದುಗರನ್ನು ಸಮಾಜಮುಖಿ ಚಿಂತನೆಗೆ ಹಚ್ಚುತ್ತದೆ. ಸಾಮಾಜಿಕ ಜವಾಬ್ದಾರಿಯ ಒತ್ತಾಸೆಯಿಂದ ಮೈ ಪಡೆದಿರುವ ಈ ಕವನ ಸಂಕಲನವು ಸಾಮಾಜಿಕ ದುರಂತಗಳನ್ನು ದಾಖಲಿಸುತ್ತಲೇ, ಆ ಎಲ್ಲಾ ದುರಂತಗಳ ವಿರುದ್ಧ ಪರಂಪರೆಯ ಉದ್ದಕ್ಕೂ ದನಿ ಎತ್ತಿದ, ಮಾನವೀಯ ಸಮಾಜ ನಿರ್ಮಾಣಕ್ಕಾಗಿ ಹಪಹಪಿಸಿದ ಹಲವಾರು ಸಾಂಸ್ಕೃತಿಕ ಚಿಂತಕರ ವಿವೇಕವನ್ನು ಕುರಿತು ಮಾತನಾಡುತ್ತದೆ.
ಕವಿ ಸುರೇಶ್ ಗೌತಮ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ, ಎಂ.ಇಡಿ, ಪಿಹೆಚ್.ಡಿ ಪದವೀಧರರು. ಸಾಮಾಜಿಕ ಪರಿವರ್ತನಾ ಚಳವಳಿಯಲ್ಲಿ ತೊಡಗಿಸಿಕೊಂಡವರು. ಕೃತಿಗಳು: ಮಾತು ಕೊಂದ ಭಾರತ , ಬೆಳ್ಳಿ ಗೆರೆಯ ದೀವಿಗೆ (ಕವನ ಸಂಕಲನ) ...
READ MORE