'ಬಾಯಾರಿಕೆ' ವಿನಯಾ ಅವರ ಪ್ರಥಮ ಕವನ ಸಂಗ್ರಹವಾದರೂ ಕಳೆದ ಎಂಟತ್ತು ವರ್ಷಗಳಲ್ಲಿ ಅವರ ಹಲವಾರು ಕವಿತೆಗಳು ಪ್ರಕಟವಾಗುತ್ತಾ ಬಂದಿವೆ. ಒಬ್ಬ ಒಳ್ಳೆಯ ಕವಿಯಲ್ಲಿ ನಾವು ನಿರೀಕ್ಷಿಸಬಹುದಾದ ಎಲ್ಲಾ ಗುಣಗಳೂ- ಅಂದರೆ ಸೂಕ್ಷ್ಮ ಸಂವೇದನೆ, ಗಂಭೀರ ಕಾಳಜಿಗಳು, ಅನುಭವದ ತೀವ್ರ ಶೋಧ, ಪ್ರತಿಮೆಗಳ ಹೊಸತನ, ಕವಿತೆ ಕಟ್ಟುವ ಕಲೆ- ವಿನಯಾ ಅವರಲ್ಲಿದೆ. ಹೀಗಾಗಿ ಪ್ರಥಮ ಪ್ರಯತ್ನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಪ್ರಬುದ್ಧತೆಯಾಗಲಿ, ಅಪಕ್ವತೆ, ಅನಿಶ್ಚಿತತೆಗಳಾಗಲಿ ಈ ಸಂಗ್ರಹದ ಯಾವ ಕವಿತೆಯಲ್ಲಿಯೂ ಕಂಡುಬರುವುದಿಲ್ಲ ಎನ್ನುವುದು ಈ ಕವಿಯ ಭವಿಷ್ಯದ ಬಗ್ಗೆ ಭರವಸೆಯನ್ನು ಹುಟ್ಟಿಸುತ್ತದೆ ಎನ್ನುತ್ತಾರೆ ಲೇಖಕ ಜಿ.ಎಸ್.ಆಮೂರ.
ವಿನಯಾ ಅವರ ಕವಿತೆಗಳಲ್ಲಿ ತಿಳಿವು ಹರಳುಗಟ್ಟಿದಾಗ ಸೋದ್ದಿಶ್ಯವಾದ ಸಂವಹನದ ಹಂಬಲ ಆಗಾಗ ಕಾಣಿಸಿಕೊಳ್ಳುತ್ತದೆ ಎನ್ನುವುದು ನಿಜವಾದರೂ ಅವರ ಕಾವ್ಯಭಾಷೆಯ ಮುಖ್ಯ ಲಕ್ಷಣ ಸಂಯಮ ಹಾಗೂ ಮೆಲುದನಿ. ಮಹಿಳೆಯರ ಕವಿತೆಗಳಲ್ಲಿ ನಮಗೆ ಸಾಮಾನ್ಯವಾಗಿ ಕೇಳಿಬರುವ ದಟ್ಟ ರೆಟರಿಕ್ ಅವರ ಕಾವ್ಯ ಪ್ರಕೃತಿಗೆ ಹೊಂದುವಂಥ ಅಂಶವಲ್ಲ, ಮಹಿಳಾ ಕಾವ್ಯದ ಚರ್ವಿತ ಮಾದರಿಗಳಿಂದಲೂ ಅವರು ದೂರ ಸಾಧಿಸಿರುವುದು ಮೆಚ್ಚುವ ಅಂಶವಾಗಿದೆ.
ವಿನಯಾ- ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ, ಕುಮಟಾ ತಾಲೂಕಿನ ನಾಡುಮಾಸ್ಕೇರಿಯಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದಿಂದ 1990ರಲ್ಲಿ ಕನ್ನಡ ಎಂ.ಎ, 1992ರಲ್ಲಿ ಎಂ.ಫಿಲ್. ಹಾಗೂ 1996ರಲ್ಲಿ ಪಿಎಚ್.ಡಿ ಪದವಿ ಪಡೆದಿದ್ದು, ಸವಣೂರು, ನರಗುಂದದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಧ್ಯ ಧಾರವಾಡ ಜಿಲ್ಲೆಯ ಅಳ್ಳಾವರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ. ವಿನಯಾ ಅವರ ಕವನ ಸಂಕಲನಗಳು: ಬಾಯಾರಿಕೆ, ನೂರು ಗೋರಿಯ ದೀಪ, ಹಸಬಿ, ಇನ್ನೂ ಕಥಾ ಸಂಕಲನಗಳು: ಊರ ...
READ MORE