`ಗೆಲ್ಲುವೆನು ನಾ ಗೆಲ್ಲುವೆನು' ಕಿಶೋರ ಸಾಹಿತಿ ಅಂತಃಕರಣನ ಕವನ ಸಂಕಲನ. ಈ ಕೃತಿಗೆ ಖ್ಯಾತ ಕವಿ ಚಿದಾನಂದ ಸಾಲಿ ಮತ್ತು ಡಾ. ಸಬಿತಾ ಬನ್ನಾಡಿ ಅವರು ಬೆನ್ನುಡಿ ಬರೆದಿದ್ದಾರೆ. ಅಂತಃಕರಣ ಈ ಕೃತಿಯಲ್ಲಿ ಮಾತಾಡಿದಷ್ಟೇ ಸಹಜವಾಗಿ ತನಗೆ ಅನಿಸಿದ್ದನ್ನು ಬರಹಕ್ಕಿಳಿಸಿದ್ದಾರೆ. ಅಂತಃಕರಣನ ಅಂತರಂಗ ಕಾಣುವುದು ಕತೆ ಕವಿತೆ ಕಾಗುಣಿತ ಕವಿತೆಯಲ್ಲಿ ಅನ್ನುತ್ತಾರೆ ಲೇಖಕಿ ಸಬಿತಾ ಬನ್ನಾಡಿ.
ಇಲ್ಲಿನ ಕವಿತೆಗಳಲ್ಲಿ ಮಗುತನ ಮತ್ತು ಮಗುವಿನ ತಾಜಾತನ ಎರಡೂ ಇವೆ. ಮಾತ್ರವಲ್ಲ ಮಕ್ಕಳಿಂದ ದೊಡ್ಡವರ ಲೋಕ ಪಡೆಯಬೇಕಾದುದು ಇಲ್ಲಿ ಸಿಗುತ್ತದೆ. ಅಂತಃಕರಣನ ಬರೆಯುವ ಒಲವು ತಾನು ಕಂಡಿದ್ದನ್ನು, ಹೇಳಿದ್ದನ್ನು, ಭಾವಿಸಿದ್ದನ್ನು ಅಕ್ಷರ ರೂಪದಲ್ಲಿ ಹಿಡಿದಿಡುವ ಅವನ ಹಂಬಲ ಈ ಕೃತಿಯಲ್ಲಿ ಎದ್ದು ಕಾಣುತ್ತದೆ.
ಅಂತಃಕರಣ ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...
READ MORE