ಅವಿಭಜಿತ ಕಲಬುರಗಿ ಜಿಲ್ಲೆಯ ಶಹಾಪುರ, ಜೇವರ್ಗಿ ಹಾಗೂ ಸುರಪುರ ತಾಲೂಕು ವ್ಯಾಪ್ತಿಯ ಪ್ರದೇಶವು ’ಸಗರನಾಡು’ ಎಂದೇ ಪ್ರಸಿದ್ಧಿ. ಈ ಪ್ರದೇಶದ ಪ್ರದೇಶದ ಪ್ರಾಚೀನ ಕವಿಗಳ ಒಂದೊಂದು ಕವನವನ್ನು ಪ್ರಾತಿನಿಧಿಕವಾಗಿ ತೆಗೆದುಕೊಳ್ಳುತ್ತಾ, ಹಳೆಗನ್ನಡ, ನವ್ಯ, ನವೋದಯ ಎಂಬ ಗೊಡವೆಗೆ ಹೋಗದೇ, ಒಂದೇ ಸರಣಿಯಲ್ಲಿ ಈಗಿನ ಹಿರಿಯ-ಕಿರಿಯ ಕವಿಗಳ ಕವನಗಳನ್ನೂ ಪೋಣಿಸಿ, ಸಗರನಾಡಿನ ಬೃಹತ್ ಕಾವ್ಯ ಮಾಲೆಯಾಗಿಸಿದ್ದೇ ’ಸಗರನಾಡ ಸಂಪದ’. ಪ. ಮಾನು ಸಗರ ಅವರು ಕವನಗಳ ಈ ಕೃತಿಯನ್ನು ಸಂಪಾದಿಸಿದ್ದು, ಸಗರನಾಡಿನ ಕಾವ್ಯ ಪರಂಪರೆಯ ನಿರಂತರತೆಯನ್ನು ಈ ಕೃತಿಯು ಪ್ರತಿನಿಧಿಸುತ್ತದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಪ. ಮಾನು ಸಗರ, ಎಂ.ಎ. ಪದವೀಧರರು. ಅರಣ್ಯ ಇಲಾಖೆಯ ಆಡಳಿತ ವ್ಯವಸ್ಥಾಪಕರಾಗಿ ನಿವೃತ್ತಿಯಾಗಿದ್ದು, ಸಗರ ನಾಡ ಸಂಪದ (ಕವನ ಸಂಕಲನ) ಕಂಪನ (ಕವನ ಸಂಕಲನ), ಚಿತ್ತ-ಚಿತ್ತಾರ (ಹನಿಗವನಗಳು), ಪ್ರೊ. ಸೂಗಯ್ಯ ಹಿರೇಮಠ ಸಂಸ್ಮರಣಾ ಗ್ರಂಥ ’ಸಗರನಾಡಿನ ಮಾಣಿಕ್ಯ’ , ಧಾರ್ಮಿಕ, ಅಧ್ಯಾತ್ಮಿಕ, ಶರಣ ಚಳವಳಿ, ಜನಪದ ಸಾಹಿತ್ಯ ಹೀಗೆ ಹಲವು ಆಯಾಮಗಳನ್ನು ಬಿಂಬಿಸುವ ’ಸಗರನಾಡು ಪರಂಪರೆ’ ಕೃತಿ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಹಲವು ಪ್ರಶಸ್ತಿ-ಗೌರವಗಳು ಸಂದಿವೆ. ...
READ MORE