ಇಂಡಿಯಾದಲ್ಲಿ ಕವಿ ಚನ್ನಪ್ಪ ಕಟ್ಟಿಯವರ ಕವನಗಳ ಸಂಕಲನ. ಸಮಾಜದ ನೋವು-ನಲುವಿಗೆ ಸ್ಪಂದಿಸುವ ಕವಿಯ ಸೂಕ್ಷ್ಮತೆಯೇ ಕಾವ್ಯ.
ಚನ್ನಪ್ಪ ಕಟ್ಟಿಯವರ ಕವಿತೆಗಳಲ್ಲಿ ಸಮಾಜದ ಕುರಿತಾದ ಸ್ಪಂದನೆಗಳಿವೆ. ಹೋರಾಟಗಾರನಾಗಿರುವ ಕವಿ ತನ್ನ ಕವಿತೆಗಳನ್ನೂ ಒಂದು ಹೋರಾಟವಾಗಿ ಬಳಸುತ್ತಾನೆ. ಇಂಡಿಯಾದಲ್ಲಿ ಕವನ ಸಂಕಲನದಲ್ಲಿ ಚನ್ನಪ್ಪ ಅವರ ವಿಭಿನ್ನ ಕವಿತೆಗಳಿವೆ. ಈ ಕವಿತೆಗಳು ಓದಿಸಿಕೊಳ್ಳುವ ವಿಶೇಷ ಗುಣವನ್ನು ಪಡೆದಿವೆ.
ಡಾ. ಚನ್ನಪ್ಪ ಕಟ್ಟಿಯವರ ಪೂರ್ಣ ಹೆಸರು ಚನ್ನಪ್ಪ ಕನಕಪ್ಪ ಕಟ್ಟಿ. ಮೂಲತಃ ಗದಗ ಜಿಲ್ಲೆ, ರೋಣ ತಾಲ್ಲೂಕು ಹಿರೇಹಾಳ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ಹಿರೇಹಾಳ ಗ್ರಾಮದಲ್ಲಿ ಮುಗಿಸಿದ ಅವರು ಮಾಧ್ಯಮಿಕ ಶಿಕ್ಷಣವನ್ನು ಶ್ರೀ ವೀರಪುಲಿಕೇಶಿ ಮಾಧ್ಯಮಿಕ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಆನಂತರ ಶ್ರೀವೀರಪುಲಿಕೇಶಿ ಪದವಿ ಪೂರ್ವ ಮಹಾವಿದ್ಯಾಲಯ, ಬಾದಾಮಿಯಲ್ಲಿ ಪದವಿ ಪೂರ್ಣ ಶಿಕ್ಷಣ ಪಡೆದ ಅವರು, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡದಲ್ಲಿ ಇಂಗ್ಲಿಷ್ ನಲ್ಲಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆನಂತರ ಸಿಂದಗಿಯ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ.ಸಾಲಿಮಠ ವಿಜ್ಞಾನ ...
READ MORE