ಚಂ.ಸು.ಪಾಟೀಲ ಅವರ ಕವನ ಸಂಕಲನ-ಅದಕ್ಕೇ ಇರಬೇಕು. ಚಿಂತಕಿ ಪಿ. ಚಂದ್ರಿಕಾ ಬರೆದ ಮುನ್ನುಡಿಯಲ್ಲಿ ‘ಹಳೆಯ ತಲೆಮಾರಿನ ಸಾಂಪ್ರದಾಯಿಕ ಭಾವನೆಗಳೊಂದಿಗೆ ಹೊಸ ಜಗತ್ತಿನ ವಿದ್ಯಮಾನಗಳನ್ನು ತಳಕು ಹಾಕಿ ನಾವಿನ್ಯತೆಯ ಸ್ಪರ್ಶ ನೀಡಿರುವ ಇಲ್ಲಿಯ ಬಹುತೇಕ ಕವಿತೆಗಳು ತಾಜಾತನವನ್ನು ಉಳಿಸಿಕೊಂಡಿವೆ. ‘ಸುಮದ ಸೆರೆಯ ಧಿಕ್ಕರಿಸಿ ಬಯಲು ತಬ್ಬಲು ಹೊರಟ ವಿಫಲ ಪ್ರಯತ್ನವಾದಿ’ ಎಂದು ಪ್ರವಾದಿ ಕವನದಲ್ಲಿ ಪ್ರವಾದಿಯ ಪರಿಕಲ್ಪನೆಯನ್ನು ವ್ಯಾಖ್ಯಾನಿಸುತ್ತಾರೆ. ಇಂತಹ ಸಾಲುಗಳಿಂದ ಇಲ್ಲಿಯ ಕವಿತೆಗಳ ಗುಣವೆಂದರೆ -ಗಟ್ಟಿತನ’. ಮಾತಿನ ಲಯಕ್ಕೆ ಬಿದ್ದು ವಾಚಾಳಿಯಂತೆ ಕಂಡರೂ ಬೇರೆ ಬೇರೆ ರೂಪಕಗಳನ್ನು ಒಟ್ಟಿಗೆ ಇರಿಸುವ ಮೂಲಕ ಇಲ್ಲೇನೋ ಇದೆ ಎಂಬ ಕುತೂಹಲ ಮೂಡಿಸುತ್ತವೆ’ ಎಂದು ಪ್ರಶಂಸಿಸಿದ್ದಾರೆ.
ಕೃಷಿಯನ್ನೇ ಜೀವನ ವಿಧಾನವಾಗಿ ಸ್ವೀಕರಿಸಿರುವ ಲೇಖಕ ಚಂಸು ಪಾಟೀಲರು (ಚಂದ್ರಶೇಖರ ಸುಭಾಶಗೌಡ ಪಾಟೀಲ, ಜನನ: 1974)) ಇವರು ಮೂಲತಃ ರಾಣೇಬೆನ್ನೂರು ತಾಲೂಕಿನ ಕೂನಬೇವು (ಅಂಚೆ: ಕಜ್ಜರಿ) ಗ್ರಾಮದವರು. ಬಿ.ಎ. ಪದವೀಧರರು. ಕೆಲವು ಕಾಲ ಸಂಯುಕ್ತ ಕರ್ನಾಟಕ, ಕ್ರಾಂತಿ ದಿನಪತ್ರಿಕೆಯಲ್ಲಿ ಹಾಗೂ ನೋಟ-ವಾರಪತ್ರಿಕೆಯಲ್ಲಿ ಸಹ ಸಂಪಾದಕರಾಗಿದ್ದರು. ಕೃಷಿ ಸಮಸ್ಗೆ ಕುರಿತು ಬರೆದ ಕೃತಿ-ಬೇಸಾಯದ ಕತಿ. ಈ ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿಯ 2018ರ ಸಾಲಿನ ಸಿಂಪಿ ಲಿಂಗಣ್ಣ ದತ್ತಿ ಪ್ರಶಸ್ತಿ ಲಭಿಸಿದೆ. ಗೆಳೆಯನಿಗೆ (1995), ಕೆಂಪುಕಂಗಳ ಹಕ್ಕಿ ಮತ್ತದರ ಹಾಡು (2004), ಅದಕ್ಕೇ ಇರಬೇಕು (2009) -ಇವರ ಕವನ ಸಂಕಲನಗಳು. ಸದ್ಯ ಗ್ರಾಮದಲ್ಲೇ ಕೃಷಿಕರಾಗಿದ್ದು,ರೈತಾಪಿ ಜಗತ್ತಿನ ಕೃಷಿ ಜಾಗೃತಿಯಲ್ಲಿ ತೊಡಗಿಕೊಂಡಿದ್ದಾರೆ. ...
READ MORE