ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ ಕವಿತೆ

Author : ಸುಮಿತ್ ಮೇತ್ರಿ

Pages 94

₹ 120.00




Year of Publication: 2019
Published by: ಕಾಜಾಣ ಪುಸ್ತಕ
Address: # 216, 5ನೇ ಮುಖ್ಯರಸ್ತೆ, ಕೆನರಾ ಬ್ಯಾಂಕ್ ಲೇಔಟ್, ಕೊಡಿಗೇಹಳ್ಳಿ, ವಿದ್ಯಾರಣ್ಯಪುರ, ಬೆಂಗಳೂರು
Phone: 9880339669

Synopsys

’ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ ಕವಿತೆ’ಯು ಸುಮಿತ್ ಮೇತ್ರಿ ಅವರ ಮೊದಲ ಕವನ ಸಂಕಲನ. ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನಸಹಾಯ ಪಡೆದಿದೆ. ಕೇಶವ ಮಳಗಿ ಅವರು ಮುನ್ನುಡಿ ಬರೆದರೆ, ಕೆ.ವಿ.ತಿರುಮಲೇಶ್ ಬೆನ್ನುಡಿಯಿದೆ. ’ಹೊಸ ಕವಿಯ ಕವನ ಸಂಕಲನ ಓದಲು ಶುರುಮಾಡಿದಾಗ ನಮಗೆ ಒದಗಬಹುದಾದ ಬೆರಗುಗಳು ಅನಿರ್ವಚನೀಯ. ಯಾಕೆ ಏನಾಯಿತು ಎನ್ನುವ ಮೊದಲೇ ಕವಿತೆಗಳು ನಮ್ಮದಾಗುತ್ತವೆ ಎನ್ನುತ್ತಾರೆ’ ಕನ್ನಡದ ಕವಿ- ವಿಮರ್ಶಕ ಕೆ.ವಿ.ತಿರುಮಲೇಶ್. ಏಕಾಂತದಲ್ಲಿ ಧ್ಯಾನಕ್ಕಿಳಿವ ಕವಿ, ತನ್ನೊಳಗೆ ತನ್ನನ್ನೇ ಹುಡುಕಿಕೊಳ್ಳುವಲ್ಲಿ ಕಳೆದುಹೋಗುತ್ತಾನೆ. ನವಿರು ನೆನಪು, ನೆಪಗಳ ಹುಡುಕುತ್ತಾ ಅಲೆವ ಮನದ ತುಮುಲಗಳನ್ನು ತಮ್ಮ ಮೊದಲ ಕವನ ಸಂಕಲನದಲ್ಲೇ ಸೆರೆಹಿಡಿದಿದ್ದಾರೆ ಕವಿ ಸುಮಿತ್ ಮೇತ್ರಿ. ಈ ಕೃತಿಗೆ ಕ.ಸಾ.ಪ ಕೊಡಮಾಡುವ 2019ನೇ ಸಾಲಿನ ಪ್ರೊ. ಡಿ. ಸಿ. ಅನಂತಸ್ವಾಮಿ ದತ್ತಿ ಪ್ರಶಸ್ತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಪ್ರಶಸ್ತಿ ದೊರೆತಿದೆ.

About the Author

ಸುಮಿತ್ ಮೇತ್ರಿ
(14 September 1986)

ಸುಮಿತ್ ಮೇತ್ರಿ- ವಿಜಯಪುರ ಜಿಲ್ಲೆಯ ಹಲಸಂಗಿಯಲ್ಲಿ 1986ರಲ್ಲಿ ಜನಿಸಿದರು. ತಂದೆ ಗಣಪತಿ, ತಾಯಿ ಗಂಗಾಬಾಯಿ ವಿಜ್ಞಾನ ಶಿಕ್ಷಕರಾದ ಇವರು ಪ್ರಸ್ತುತ ರಾಯಚೂರು ಜಿಲ್ಲೆ ದೇವದುರ್ಗದ ಕಜ್ಜಿಬಂಡಿ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಲಸಂಗಿ, ವಿಜಯಪುರ ಮತ್ತು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ. ಓದು-ಬರಹ, ಕಾವ್ಯ, ಕಾಡು, ಸುತ್ತಾಟ ಇವರ ಅಭಿರುಚಿ. ಮೌನ, ಧ್ಯಾನ ಅಂದರೆ ಬಲು ಇಷ್ಟ ಎನ್ನುವ ಇವರು ಏಕಾಂತ ಅವರ ಪಾಲಿನ ಸ್ವರ್ಗ ಎನ್ನುತ್ತಾರೆ. ಓದು, ಬರಹದ ಜೊತೆಗೆ ಪೋಟೋಗ್ರಫಿ ಸುಮಿತ್ ಅವರ ಮೆಚ್ಚಿನ ಹವ್ಯಾಸಗಳನ್ನೊಂದು. ರಾಜ್ಯ ಮಟ್ಟದ ವಿಜ್ಞಾನ ಆವಿಷ್ಕಾರಗಳಲ್ಲಿ ತೊಡಗಿಕೊಂಡಿದ್ದು, ಅನೇಕ ಇಲಾಖಾ ...

READ MORE

Awards & Recognitions

Reviews

ವಿಳಾಸ ಬರೆದ ಕವಿತೆಗಳು

ಕವಿಯಾಗಿ ತನ್ನ ಸುತ್ತಲಿನ ವಸ್ತು ಪ್ರಪಂಚ, ಸಂಗತಿ, ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅದಕ್ಕೆ ಮಾತು ಕೊಡುವ ಗುಣವನ್ನು ಅಳವಡಿಸಿಕೊಂಡಿರುವ ಸುಮಿತ್ ಮೇತ್ರಿ ಅವರು ಇತ್ತೀಚಿಗೆ ಬರೆಯುತ್ತಿರುವ ಅಗಾಧ ಭರವಸೆಯನ್ನು ಮೂಡಿಸಿರುವ ಯುವಕವಿಗಳಲ್ಲಿ ಪ್ರಮುಖರು.

ಯಾವುದೇ ಪೂರ್ವ ನಿರ್ಧಾರಿತ ನಿಲುವು ಮತ್ತು ನಿರೀಕ್ಷೆಗಳಿಲ್ಲದೇ ಓದುಗನೊಬ್ಬ ಕವಿತೆಯೊಂದಿಗೆ ಮುಖಾಮುಖಿಯಾದಾಗ ಆತನ ಕಣ್ಮುಂದೆ ಅದ್ಭುತವಾದ ಲೋಕವೊಂದು ತೆರೆದುಕೊಂಡು, ಅವನ ಎದೆಯಲ್ಲಿ ಆನಂದ ವಿಸ್ಮಯಗಳ ತರಂಗಗಳೆದು ದಿವ್ಯಾನಂದ ಪಡೆಯುವ ಅಮೃತ ಘಳಿಗೆಯೊಂದು ಹುಟ್ಟುತ್ತದೆ ಎಂಬ ಮಾತಿಗೆ ಬದ್ದರಾಗಿ ಕವಿತೆಯ ಗೀಳಿಗೆ ಬಿದ್ದಿರುವ ಕವಿ ಸುಮಿತ್ ತಾಧ್ಯಾತ್ಮದಿಂದ 

ಕಟ್ಟುವಾಗ ಅತ್ಯಂತ ನಯ ನಾಜೂಕಿನಿಂದ ರೂಪಕಗಳನ್ನು ಬಳಸುವ ಪರಿಗೆ ಆ ಕವಿತೆಯೊಂದು ಸುಂದರವಾದ ಕಲಾಕೃತಿ ಯಂತೆ ಅರಳಿ ಬಿಡುತ್ತದೆ ಎಂದರೆ ಅತಿಶಯೋಕ್ತಿ ಯಾಗಲಾರದು!

ಪ್ರಸ್ತುತ ಇಂಥ ಕವಿತೆಗಳಿಗೆ ಸಾಕ್ಷಿಯಾಗಿರುವ ಸುಮಿತ್ ಅವರ 'ಥಟ್ ಅಂತ ಬರೆದು ಕೊಡುವ ರಶೀದಿಯಲ್ಲಿ ಕವಿತೆ’ ಎಂಬ ಕವನ ಸಂಕಲನವು ಓದುಗರ ವಲಯದಲ್ಲಿ ಚರ್ಚೆ ಗೊಳಪಡುತ್ತಿರುವುದಕ್ಕೆ ಆ ಸಂಕಲನದಲ್ಲಿರುವ ಕವಿತೆ ಗಳು ಹೊಂದಿರುವ ತಾಜಾತನವೇ ಕಾರಣವಾಗಿದೆ ಎನ್ನಬೇಕು. ಈ ತಾಜಾತನ ಉಳಿಯುವುದಕ್ಕೆ, ಕವಿಯಾಗಿ ಸುಮಿತ್ ಬದುಕುತ್ತಿರುವ ವ್ಯವಸ್ಥೆ ಮತ್ತು ಈ ವ್ಯವಸ್ಥೆಯ ಅಂಗವಾದ ಅವರು ಬದುಕಿಗೆ ಅಗತ್ಯವಾದ ಯಾವ ದಾರಿ ಹಿಡಿದಿರುವರೋ ಆ ದಾರಿಯಲ್ಲಿ ಕಂಡುಕೊಂಡ ತಾತ್ವಿಕತೆಯ ನೆಲೆಯಲ್ಲಿಯೇ ಇಲ್ಲಿನ ಕವಿತೆಗಳಲ್ಲಿ ವ್ಯವಸ್ಥೆಯ ವಿವಿಧ ಮುಖಗಳನ್ನು ಕಾಣಿಸುತ್ತ ಹೋಗಿರುವುದು ಮತ್ತೊಂದು ಕಾರಣವಾಗಿದೆ.

ಕಲ್ಲೇಶ್ ಕುಂಬಾರ್, ಕೃಪೆ: ಸಂಯುಕ್ತ ಕರ್ನಾಟಕ, (2020 ಫೆಬ್ರುವರಿ 02)

Related Books