ಕವಿ ಬಿ.ಎಂ.ರಾವ್ ಆನೂರು ಅವರು ರಚಿಸಿದ ಕವನ ಸಂಕಲನ-ಭಾವನೆಯ ಗೊಂಚಲು. ಪ್ರೀತಿ ಹೊರಗೆ ಕಾಣುವ ಹುಣ್ಣಲ್ಲ, ಒಳಗೆ ಬೇಯುವ ಬಾವು ಎಂಬ ಉಪಶೀರ್ಷಿಕೆಯಡಿ ಕವನಗಳನ್ನು ರಚಿಸಿದ್ದು ವಿಶೇಷ. ಸಂಕಲನದಲ್ಲಿ ಒಟ್ಟು 273 ಹನಿಗವನಗಳಿವೆ. ಸಾಹಿತಿ ಡಾ. ವೀರಣ್ಣ ದಂಡೆ ಅವರು ಕೃತಿಗೆ ಮುನ್ನುಡಿ ಬರೆದು ‘ಪ್ರೀತಿ-ಪ್ರೇಮ-ಹೆಣ್ಣು-ಯುವಕ-ಯುವತಿ ಹೀಗೆ ವಿಷಯ ವಸ್ತು ಮಾತ್ರವಲ್ಲ; ಸಾಮಾಜಿಕ ಹೊಣೆಗಾರಿಕೆಯನ್ನು ಎಚ್ಚರಿಸುವ ಹನಿಗವಿತೆಗಳೂ ಇವೆ. ಭೂಮಾಫಿಯಾ, ಮರಳು ಮಾಫಿಯಾ ಇತ್ಯಾದಿ ಹಗರಣಗಳ ವಿರುದ್ಧವೂ ಕವನಗಳನ್ನು ಹೆಣೆದಿದ್ದಾರೆ. ನೈಸರ್ಗಿಕ ಕಾಳಜಿಯ ಕವನಗಳೂ ಇವೆ ಎಂದು ಪ್ರಶಂಸಿಸಿದ್ದಾರೆ. ಸಾಹಿತಿ ರಾ.ಹು. ಕೃತಿಗೆ ಬೆನ್ನುಡಿ ಬರೆದು ‘ತಮ್ಮ ಅನುಭವದ ಪರಿಪಕ್ಷದ ಭಾವನಗಳನ್ನು ಕಾವ್ಯಾತ್ಮಕವಾಗಿಸಿ, ಕವನ ಕಟ್ಟುವ ಸಾಮರ್ಥ್ಯ ಅವರಿಗಿದೆ’ ಎಂದು ಪ್ರಶಂಸಿಸಿದ್ದರೆ, ಸಾಹಿತಿ ಬಾಬೂರಾವ್ ಜಮಾದಾರ ಬಾದನಳ್ಳಿ ‘ಬಿಡದೇ ಕಾಡುವ ಮಧುರ ಕವಿತೆಗಳ ಸಾಲಿನಲ್ಲಿ ಈ ಕವಿತೆಗಳು ನಿಲ್ಲುತ್ತವೆ’ ಎಂದು ಶ್ಲಾಘಿಸಿದ್ದಾರೆ.
ಕವಿ ಬಿ.ಎಂ.ರಾವ್ ಆನೂರು ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಆನೂರು ಗ್ರಾಮದವರು. ಹುಟ್ಟೂರಿನಲ್ಲೇ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿ, ಕಲಬುರಗಿಯಲ್ಲಿ ಪಿಯುಸಿ, ಧಾರವಾಡದಲ್ಲಿ ಪದವಿ ಶಿಕ್ಷಣ ನಂತರ ಬೆಂಗಳೂರು ವಿ.ವಿ.ಯಿಂದ ಎಂ.ಎ ಪದವೀಧರರು. ಮೈಸೂರು ವಿ.ವಿ.ಯಿಂದ ಎಂಫಿಲ್ ಪದವೀಧರರು. ಸದ್ಯ, ಅಫಜಲಪುರದ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರು.ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ಅಹಿಂದ ನೌಕರರ ಸಂಘದ ಅಧ್ಯಕ್ಷರಾಗಿ, ತಾಲೂಕು ಸಾಹಿತ್ಯ ವೇದಿಕೆಯ ಕಾರ್ಯದರ್ಶಿಯಾಗಿ, ದೇವರಾಜುಅರಸು ಹಿತರಕ್ಷಣಾ ವೇದಿಕೆಯ ಸಂಚಾಲಕರಾಗಿದ್ದರು. ಕೃತಿಗಳು: ಕಣ್ಣಂಚಿನ ಹನಿಗಳು, ತೀರದ ತೆರೆ, ಶಿಕ್ಷಕರ ಸಾಹಿತ್ಯ, ಭಾವನೆಯ ಗೊಂಚಲು, ಮನದೊಳಗಿನ ಮೌನ, ಅಲೆಗಳು, ಭೀಮಾತೀರದಲ್ಲಿ ...
READ MORE