ಕವಿ ಆಯುರ್ ರೇವಣ್ಣ ಅವರ ಕವನಗಳ ಸಂಕಲನ ‘ಲಾಕ್ ಡೌನ್ -108’. ಕೃತಿಗಳಲ್ಲಿ ಕವಿಯೇ ಬರೆದಿರುವಂತೆ, ಇಲ್ಲಿನ ಕವನಗಳಲ್ಲಿ ಮಾತು ಮೌನ, ಮಳೆ, ಪ್ರಕೃತಿ, ಮುನಿಸು, ಸಂತಸ, ಕಣ್ಣೀರು, ಆನಂದಭಾಷ್ಟ, ದೈವ ಹೀಗೆ ಎಲ್ಲ ತರಹದ ಭಾವಗಳು ಬಿತ್ತರವಾಗಿವೆ. ಆದರೆ ನದಿಯು ಕಡಲ ಸೇರುವ ಹಾಗೆ ಇವೆಲ್ಲ ಭಾವಗಳು ಪ್ರೀತಿಯೆಂಬ ಕಡಲನ್ನು ಸೇರಿಕೊಂಡಿದೆ ಎಂಬುದಾಗಿ ಹೇಳಿದ್ದಾರೆ. ಕೃತಿಯ ಪರಿವಿಡಿಯಲ್ಲಿ ದೈವದ ಮುತುವರ್ಜಿ, ಅಗಲಿಕೆ ಇರದ ಅನುಬಂಧ , ಯಾರು ನೀನು ನನಗೆ ?, ಅಪರೂಪದ ಪ್ರೀತಿ ದಕ್ಕಿತು, ಪ್ರೀತಿಯು ಜನ್ಮಿಸಿದ ಘಳಿಗೆ, ಪ್ರೀತಿಸುವೆ ನಿನ್ನನೆ, ಬೆಚ್ಚನೆಯ ಮಡಿಲಾಗು, ಮರುಪಾವತಿಸುವುದು ಹೇಗೆ ?, ಸಾವಿನಂಚಿನ ಬದುಕು, ನಿನ್ನ ಸಾಂಗತ್ಯವೊಂದೇ ಸಾಕು, ನಿನ್ನ ಪ್ರೀತಿಯ ಚೌಕಟ್ಟಿನಲ್ಲಿಪ್ರೀತಿಯದೇ ತಪ್ಪು? ಹೀಗೆ ಅನೇಕ ಶೀರ್ಷಿಕೆಗಳ ಕವನಗಳಿವೆ.
ಯುವ ಕವಿ ಆಯುರ್ ರೇವಣ್ಣ ಅವರು ಮೂಲತಃ ಹಾಸನ ಜಿಲ್ಲೆಯವರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ. ಬರವಣಿಗೆಯ ಜೊತೆಗೆ ಸಿನಿಮಾ ರಂಗದಲ್ಲಿ ನಿರ್ದೇಶಕನಾಗಿ ನಟನಾಗಿಯೂ ಗುರುತಿಸಿಕೊಂಡವರು. ಇವರ ಪ್ರಥಮ ಕವನ ಸಂಕಲನ ಲಾಕ್ ಡೌನ್ -108. ...
READ MORE