ಕವಿ ಡಿ.ಬಿ.ಢಂಗ ಅವರ ಗೇಯ ಕವನಗಳ ಸಂಕಲನ-ಕಾಲದ ಗತಿ. ಸಾಹಿತಿ ಕಮಲಾ ಹೆಮ್ಮಿಗೆ ಅವರು ಕೃತಿಗೆ ಮುನ್ನುಡಿ ಬರೆದು ‘ಉತ್ತರ ಕರ್ನಾಟಕದ ‘ದೇಸಿ’ಯನ್ನು ವಿಶೇಷವಾಗಿ ಕುಂದರ ನಾಡಿನ ಸತ್ವವನ್ನು ಸಮರ್ಥವಾಗಿ ಬಳಸಿರುವುದು ಇವರ ಹೆಚ್ಚುಗಾರಿಕೆ. ವಯಸ್ಸಾದಂತೆ ಮೈಗೂಡಿಸಿಕೊಳ್ಳಬೇಕಾದ ತಿಳಿವನ್ನು ಕವನಗಳು ಹೇಳುತ್ತವೆ. ಕಾವ್ಯಗಳು ಆತುರವಿಲ್ಲದ ನಡೆಯಂತಿವೆ’ ಎಂದು ಪ್ರಶಂಸಿಸಿದ್ದಾರೆ. ಹಸಿರು, ಬಂದ ಹಾಗೆ, ಅರ್ಥವಿಲ್ಲದ ಹಾಡು, ಐನೈತಿ ಹೀಗೆ ಒಟ್ಟು 20 ಕವಿತೆಗಳು ಇಲ್ಲಿ ಸಂಕಲನಗೊಂಡಿವೆ.
ಕವಿ ಡಿ.ಬಿ.ಢಂಗ ಅವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಚಿಕಾಲಗುಡ್ಡ (ಜನನ: 01-06-1960) ಗ್ರಾಮದವರು. ಬಿ.ಎಸ್.ಸಿ, ಬಿ.ಎಡ್, ಹಾಗೂ ಡಿಎಂಸಿ ಪದವೀಧರರು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಪ್ರೃತ್ತಿಯಿಂದ ಚಿತ್ರಕಲಾವಿದರು. ಕವನ ಸಂಕಲನಗಳು: ನಕ್ಷತ್ರಗಳು (1985), ಕಣ್ಣು ಹೊಡೆ (1989), ಕುಡಗೋಲು (1992), ನಿರೀಕ್ಷೆ (1992), ಸಾಗಿದೆ ಪ್ರಪಂಚ (2005), ಅರ್ಥ -ಅನರ್ಥ (2013), ಕಾಲದ ಗತಿ (2020) , ವಿಮರ್ಶೆ ಕೃತಿ: ಕಾವ್ಯ ನೋಟ (2003) ಇತರೆ: ಜನಾಂಗ ಪರಿಚಯ (1988), ಪ್ರಶಸ್ತಿಗಳು: ಸಂಕ್ರಮಣ ಸಾಹಿತ್ಯ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಬಹುಮಾನ(1994), ‘ಸಾಗಿದೆ ...
READ MORE