‘ಮಾಸದ ಕಲೆಗಳು’ ಕವಿ ವಿಜಯಕಾಂತ ಪಾಟೀಲರ ಚೊಚ್ಚಲ ಕವನ ಸಂಕಲನ. ಈ ಮೂಲಕ ಭವಿಷ್ಯದಲ್ಲಿ ಕಾವ್ಯ ಹೊರಳಿಕೊಳ್ಳಬಹುದಾದ ಮಾನವೀಯ, ಸಾಮಾಜಿಕ ನಡೆಯನ್ನು ಕವಿ ಸ್ಪಷ್ಟಪಡಿಸಿಕೊಂಡಿದ್ದಾರೆ. ಬಂಡಾಯ ಮನೋಧರ್ಮಕ್ಕನುಗುಣವಾಗಿ ಅರಳಿಕೊಂಡ ಇಲ್ಲಿಯ ಹಿರಿಗವನಗಳು ಮತ್ತು ಕಿರುಗವಿತೆಗಳು ಬದುಕು ಬವಣೆಗಳ ಒಡನೆಯೇ ಪ್ರೀತಿಯೆಡೆಗೂ ತನ್ನ ಚಿತ್ತವನ್ನು ಹರಿಸಿವೆ. ಇಲ್ಲಿ ಕಾವ್ಯಬಂಧದ ಕಡೆಗೂ ಕವಿ ಗಮನ ಹರಿಸಿರುವುದು ಸಂತಸದ ಸಂಗತಿ.
ವಿಜಯಕಾಂತ ಪಾಟೀಲ- ಹಾನಗಲ್ಲ ತಾಲೂಕಿನ ಕ್ಯಾಸನೂರಿನಲ್ಲಿ 1969 ರ ಅಗಸ್ಟ್ 9ರಂದು ಹುಟ್ಟಿದ್ದು; ಪ್ರಾಥಮಿಕ, ಪ್ರೌಢಶಿಕ್ಷಣ: ಕ್ಯಾಸನೂರು, ಶಕುನವಳ್ಳಿ (ಸೊರಬ); ಪಿಯುಸಿಯಿಂದ ಎಂ.ಎ (ಅರ್ಥಶಾಸ್ತ್ರ), ಎಲ್‌ಎಲ್‌ಬಿ ಧಾರವಾಡ; ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ; ಸದ್ಯ ಹಾನಗಲ್ಲಿನಲ್ಲಿ ನ್ಯಾಯವಾದಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ, ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕ. ಪ್ರಕಟಿತ ಕೃತಿಗಳು: ಮಾಸದ ಕಲೆಗಳು (1994), ಸಲಸಲದ ಪಾಡು : (2003), ನೂರು ಬಣ್ಣದ ಕಣ್ಣು (2012), ಹೌದು ನಾನು ಕೌದಿ (2013), ಇಂತಿ ನದಿ (20050)ಕವನ ಸಂಕಲನ. ಪ್ರಬಂಧ: ವಜನುಕಟ್ಟು (2005), ಮಕ್ಕಳ ಸಾಹಿತ್ಯ: ...
READ MORE