ಕವಿ ಚಂದ್ರಶೇಖರ ಎಸ್. ಪಾಟೀಲ (ಚಂಸು. ಪಾಟೀಲ) ಬರೆದ ಕವನ ಸಂಕಲನ-ಕೆಂಪು ಕಂಗಳ ಹಕ್ಕಿ ಮತ್ತದರ ಹಾಡು. ಕೃತಿಗೆ ಮುನ್ನುಡಿ ಬರೆದ ಸಾಹಿತಿ ಮೋಹನ ನಾಗಮ್ಮನವರ ‘ಅಣಿಗೊಂಡ ಹಾದಿಯನ್ನು ನಿರಾಕರಿಸಿ, ಹೊಸ ನಡೆಯಲ್ಲಿ ತೊಡಗಿಕೊಂಡಿರುವ ಈ ಕಾವ್ಯಪಥಿಕನ ಮುಗ್ಧತೆ, ಕಣ್ಣುಗಳಲ್ಲಿ ತುಂಬಿಕೊಂಡ ಬೆರಗು ಹಾಗೂ ಕನ್ನಡ ಕಾವ್ಯ ಲೋಕದ ಲಕ್ಷಣಗಳೊಂದಿಗೇ ಸಾಗುವ ಕಾವ್ಯಶ್ರದ್ಧೆಯ ಪ್ರಯತ್ನದಿಂದಾಗಿ ಚಂ.ಸು. ಪಾಟೀಲರ ಕಾವ್ಯಯಾತ್ರೆಗೊಂದು ಗತಿ ಸಿದ್ಧಿಸಿದೆ ಎಂದು ಪ್ರಶಂಸಿಸಿದ್ದಾರೆ.
ಕೃಷಿಯನ್ನೇ ಜೀವನ ವಿಧಾನವಾಗಿ ಸ್ವೀಕರಿಸಿರುವ ಲೇಖಕ ಚಂಸು ಪಾಟೀಲರು (ಚಂದ್ರಶೇಖರ ಸುಭಾಶಗೌಡ ಪಾಟೀಲ, ಜನನ: 1974)) ಇವರು ಮೂಲತಃ ರಾಣೇಬೆನ್ನೂರು ತಾಲೂಕಿನ ಕೂನಬೇವು (ಅಂಚೆ: ಕಜ್ಜರಿ) ಗ್ರಾಮದವರು. ಬಿ.ಎ. ಪದವೀಧರರು. ಕೆಲವು ಕಾಲ ಸಂಯುಕ್ತ ಕರ್ನಾಟಕ, ಕ್ರಾಂತಿ ದಿನಪತ್ರಿಕೆಯಲ್ಲಿ ಹಾಗೂ ನೋಟ-ವಾರಪತ್ರಿಕೆಯಲ್ಲಿ ಸಹ ಸಂಪಾದಕರಾಗಿದ್ದರು. ಕೃಷಿ ಸಮಸ್ಗೆ ಕುರಿತು ಬರೆದ ಕೃತಿ-ಬೇಸಾಯದ ಕತಿ. ಈ ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿಯ 2018ರ ಸಾಲಿನ ಸಿಂಪಿ ಲಿಂಗಣ್ಣ ದತ್ತಿ ಪ್ರಶಸ್ತಿ ಲಭಿಸಿದೆ. ಗೆಳೆಯನಿಗೆ (1995), ಕೆಂಪುಕಂಗಳ ಹಕ್ಕಿ ಮತ್ತದರ ಹಾಡು (2004), ಅದಕ್ಕೇ ಇರಬೇಕು (2009) -ಇವರ ಕವನ ಸಂಕಲನಗಳು. ಸದ್ಯ ಗ್ರಾಮದಲ್ಲೇ ಕೃಷಿಕರಾಗಿದ್ದು,ರೈತಾಪಿ ಜಗತ್ತಿನ ಕೃಷಿ ಜಾಗೃತಿಯಲ್ಲಿ ತೊಡಗಿಕೊಂಡಿದ್ದಾರೆ. ...
READ MORE