ಪಟ್ಟಕ ಡಾ.ಅನಿಲ್ ಕುಮಾರ್ ಪಿ.ಜಿ ಅವರ ಕವನ ಸಂಕಲನವಾಗಿದೆ. ಈ ಕವನ ಸಂಕಲನದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ನೋಡುವ ಜೀವನದ ಪರಿಯನ್ನು ವಿವಿಧ ದೃಷ್ಟಿಕೋನಗಳಿಂದ ಕವನಗಳ ರೂಪದಲ್ಲಿ ಅಭಿವ್ಯಕ್ತಿಸಿದ್ದಾರೆ. ಬಳಸಿರುವ ಭಾಷೆಯು ಅತ್ಯಂತ ಸರಳ ಹಾಗೂ ಪ್ರತಿಯೊಬ್ಬರಿಗೂ ಸುಲಭವಾಗಿ ಅರ್ಥವಾಗುವಂತಿದೆ.
ಅನಿಲ್ ಕುಮಾರ್ ಪಿ.ಗ್ರಾಮಪುರೋಹಿತ್ ಅವರು ಎಂ.ಎಸ್ಸಿ, ಎಂ.ಫಿಲ್, ಪಿಹೆಚ್ ಡಿ ಪದವೀಧರರು. ಸಾಹಿತ್ಯ ಕೃಷಿಯಲ್ಲಿ ಮೂರು ದಶಕಗಳಿಂದಲೂ ಹೆಚ್ಚು ಕಾಲ ತೊಡಗಿಸಿಕೊಂಡಿದ್ದಾರೆ. ತಮ್ಮ ಪೊಲೀಸ್ ಇಲಾಖೆಯ ಸೇವೆಯೊಂದಿಗೆ ಸಾಹಿತ್ಯದ ಬಗ್ಗೆ ಒಲವನ್ನು ಬೆಳೆಸಿಕೊಂಡಿರುವ ಇವರು ಈಗಾಗಲೇ ಸಂಚಾರ ವಿಭಾಗಕ್ಕೆ ಸಂಬಂಧಿಸಿದಂತೆ ರಸ್ತೆ ಸುರಕ್ಷತೆ, ರಸ್ತೆ ಸುರಕ್ಷಾ ಶತಕ ಪುಸ್ತಕಗಳನ್ನು ರಚಿಸಿದ್ದಾರೆ. ಜೊತೆಗೆ ಜೀಕಬೇಕು, ತುಂತುರು, ಪಟ್ಟಕ ಎಂಬ ಮೂರು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಕೃತಿಗಳು: ಜೀಕಬೇಕು, ತುಂತುರು, ರಸ್ತೆ ಸುರಕ್ಷತೆ, ರಸ್ತೆ ಸುರಕ್ಷಾ ಶತಕ , ಪಟ್ಟಕ , ಮೆಲುಕು, ಭಾವತೋರಣ, ಟ್ರಾಫಿಕ್ ಮ್ಯಾನ್ಯುಯಲ್ (ಅನುವಾದ), Traffic is ...
READ MORE