‘ಹಕ್ಕಿಗಳಿಗೆ ವೀಸಾ ಕೊಟ್ಟವರ್‍ಯಾರು’ ಎಂಬುದು ಡಾ. ಎಂ. ವೆಂಕಟಸ್ವಾಮಿ ಅವರ ಕವನ ಸಂಕಲನ. ಸಾಹಿತಿ ಚಂದ್ರಶೇಖರ ಆಲೂರು ಕೃತಿಗೆ ಬೆನ್ನುಡಿ ಬರೆದು ‘ಈಶಾನ್ಯ ಭಾರತದ ಜನರ ಬದುಕು-ಭವಣೆಗಳನ್ನು: ಉಲ್ಲಾಸ-ಉತ್ಸಾಹಗಳನ್ನು; ದುಃಖ-ದುಮ್ಮಾನಗಳನ್ನು ತಮ್ಮ ಗದ್ಯ-ಪದ್ಯಗಳ ಮೂಲಕ ಕನ್ನಡ ಓದುಗರಿಗೆ ತೋರಿದವರು ಗೆಳೆಯ ವೆಂಕಟಸ್ವಾಮಿ.ಇವರ ಎರಡನೇ ಕವನ ಸಂಕಲನ `ಹಕ್ಕಿಗಳಿಗೆ ವೀಸಾ ಕೊಟ್ಟವರ್‍ಯಾರು’ ಪ್ರಕಟವಾಗುತ್ತಿದೆ. ಅದು ಗದ್ಯವಿರಲಿ, ಪದ್ಯವಿರಲಿ ವೆಂಕಟಸ್ವಾಮಿಯವರ ಬರವಣಿಗೆಯ ಹಿಂದೆ ಗಾಢ ಮುಗ್ಧತೆಯಲ್ಲಿ ಅದ್ದಿದ ಮಾನವೀಯ ತುಡಿತವಿರುತ್ತದೆ. ಭೂವಿಜ್ಞಾನಿಯಾಗಿ ಭೂಮಿಯ ಆಳ, ಹರವು ಅರಿಯಲು ಹೊರಟ ವೆಂಕಟಸ್ವಾಮಿ ತಮ್ಮ ಮಣ್ಣಿನ ನೆಂಟನ್ನು ಎಂದೂ ಬಿಟ್ಟುಕೊಟ್ಟಿಲ್ಲ. ಅಂತೆಯೇ `ಮಳೆಗಾಲ ಬಂದರೆ ಮಣ್ಣಿಗೆ ಮೈತುಂಬಾ ಕೆಲಸ' ಎಂದು ಬರೆಯಲು ಸಾಧ್ಯವಾಗಿದೆ. ಈ ಸಂಕಲನದಲ್ಲಿ `ಸ್ಪೇಸ್ ಅಂಡ್ ಟೈಮ್', ಅಣುಬಾಂಬ್ ಕುರಿತ ಕವನಗಳಿರುವಂತೆಯೇ, ಜೀವನದಲ್ಲಿ ಸಣ್ಣಪುಟ್ಟ ಸಂತೋಷಗಳನ್ನು ಹಂಚಿಕೊಳ್ಳುವ ವೀಳ್ಯದ ಸೊಗಡನ್ನು ಬಣ್ಣಿಸುವ ಕವನವೂ ಇದೆ. ಲೇಖಕರು ಹಲವು ವಿದ್ಯುತ್ ಕೃತಿಗಳನ್ನು ಪ್ರಕಟಿಸಿದ್ದದೂ ಬದುಕಿನ ಬಗೆಗಿನ ವಿಸ್ಮಯ, ಅಚ್ಚರಿ, ಬೆಡಗನ್ನು ಉಳಿಸಿಕೊಂಡಿದ್ದಾರೆ. ಇಂಥ ಕವಿಯಲ್ಲಿ ಮಾತ್ರ ‘ಹಕ್ಕಿಗಳಿಗೆ ವೀಸಾ ಕೊಟ್ಟವರ್‍ಯಾರು, `ಪರ್ವತಗಳನ್ನು ಯಾರು ಎತ್ತಿ ನಿಲ್ಲಿದರು ಅಷ್ಟು ಎತ್ತರಕ್ಕೆ' ಎಂಬ ಕವನಗಳು ಹೊಮ್ಮಲು ಸಾಧ್ಯ. ಕವಿ ಬೆಳೆಯವೇಕು ಎತ್ತರಕೆ ಮಣ್ಣಿಂದ ಶಕ್ತಿ ಹೀರಿ ನಿಲ್ಲುವ ಮರದಂತೆ, ಕವಿತೆಗೆ ಹೊಸ ಭಾವ ಮೂಡಿ ಬರಬೇಕು; ವಸಂತದಲಿ ಗಿಡ ಮರಗಳು ಚಿಗುರಿದಂತೆ ಕಾವ್ಯ ಕೊನರಿ ಬಯಲು ಬೆಟ್ಟಗಳೆಲ್ಲ ಹರಡಬೇಕು, ಪ್ರೀತಿ ಸಮೃದ್ಧಿ ಮಾಡಬೇಕು’ ಎಂದು ಆಶಿಸಿದ್ದಾರೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಗೆ ಸೇರಿದ ಡಾ.ಎಂ.ವೆಂಕಟಸ್ವಾಮಿ ಅವರು 06.11.1955 ರಂದು ಜನಿಸಿದರು, ಪ್ರಾಥಮಿಕ ಶಿಕ್ಷಣ ತನ್ನ ಊರಿನಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಘಟ್ಟುಮಾದಮಂಗಳದಲ್ಲಿ ಪೂರೈಸಿದರು. ಕೆ.ಜಿ.ಎಫ್‍ನ ಮುನಿಸಿಪಲ್ ಬಾಯ್ಸ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮತ್ತು ಕೆಜಿಎಫ್ ಪ್ರ.ದ.ಕಾಲೇಜಿನಲ್ಲಿ ಬಿ.ಎಸ್ಸಿ. ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (ಭೂವಿಜ್ಞಾನ) ಎಂ.ಎಸ್ಸಿ., ಮುಗಿಸಿದರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾದರು. ಅದಕ್ಕೆ ಮುಂಚೆ ಸ್ವಲ್ಪ ಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿ (SAIL) ಕೆಲಸ ಮಾಡಿದ್ದರು. ‘ಕೋಲಾರ ಚಿನ್ನದ ಗಣಿಗಳು'' ಮಹಾಪ್ರಬಂಧಕ್ಕೆ ...
READ MORE