ಲೇಖಕ-ಕವಿ ಬಿ. ಸಿ ರಾಮಚಂದ್ರ ಶರ್ಮ ಅವರ ಎಂಟನೇ ಕವನ ಸಂಕಲನ ’ಸಪ್ತಪದಿ’. ಈ ಕವನ ಸಂಕಲನದಲ್ಲಿ ಮೊದಲನೆಯ ಭಾಗದಲ್ಲಿ ಇಪ್ಪತ್ತು ಸಾನೆಟ್ಟುಗಳಿವೆ.
ಭಾಗ ಒಂದರಲ್ಲಿ - ನೀನೆ ದೀಪದ ಮನೆ, ಇಂಗ್ಲೆಂಡಿನೊಂದು ಮೇ ಹಗಲು ನೀನು, ನೆನಪು,- ನೆನಪಿಗೆ ಮಾತು, ಅಂತರ, ಕೌಶಿಕ, ಅಕ್ಕ-ತಂಗಿ, ಅವಳ ಹುಟ್ಟು ಹಬ್ಬದ ರಾತ್ರಿ -ಅವನು, ಮದುವೆಯ ವರ್ಧಂತಿಯ ದಿನ, ,ಮನೆಯೆದುರಿನ ಪಿಚಕಾರಿ ಮರ, ಅಜ್ಜನ ಕಾಲದ ಆಲ್ಬಮ್ ನೋಡಿ, ಆತ್ಮ , ಶೋಧ, ಕಡಲು ಕವನಗಳಿವೆ.
ಭಾಗ ಎರಡರಲ್ಲಿ- ತಂದೆ, ಗೋಪಾಲಕೃಷ್ಣ ಅಡಿಗ, ಈ ದಿನಗಳೇ ಹೀಗೆ, ಮೇಜ ಮೇಲಿನ ಬುದ್ಧ, ಹಕ್ಕಿಗೆ ಸಾವಿಲ್ಲ, ಅಕ್ಕ , ಅಮ್ಮ ಸಾಯುವ ಮುಂಚೆ, ಪ್ರತಿಮೆಗಳು. ಭಾಗ ಮೂರರಲ್ಲಿ – ಅಳತೆ, ಭ್ರಮೆ, ಕೃತಜ್ಞತೆ, ಪ್ರತೀಕಾರ, ಸೃಷ್ಟಿ, ಪ್ರಪಂಚಜ್ಞಾನ, ವಿರಸ, ಮಳೆ, ಮಳೆ ನಿಂತ ಮೇಲೆ, ಸಹಭೋಗ ಕವನಗಳನ್ನು ಕಾಣಬಹುದು.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ 1925ರ ನವೆಂಬರ್ 28ರಂದು ಜನಿಸಿದ ಕವಿ ಡಾ. ಬಿ.ಸಿ.ರಾಮಚಂದ್ರ ಶರ್ಮ ಅವರು ನವ್ಯ ಸಾಹಿತ್ಯ ಕಾಲ ಘಟ್ಟದ ಪ್ರಮುಖ ಲೇಖಕರಲ್ಲಿ ಒಬ್ಬರು. ನವೋದಯ ಮತ್ತು ಪ್ರಗತಿಶೀಲ ಚಳವಳಿಯ ಸಣ್ಣ ಕಥೆಗಳಿಗಿಂತ ಭಿನ್ನವಾದ ಹೊಸ ಸಂವೇದನೆಯ ಕಥೆಗಳನ್ನು ರಚಿಸಿದವರು. ಕನ್ನಡದ ಮೊತ್ತಮೊದಲ ನವ್ಯ ಕಥೆಗಾರ ಎಂದು ಗುರುತಿಸುವಷ್ಟರ ಮಟ್ಟಿಗೆ ಅವರ ಕಥೆಗಳ ಸಾಹಿತ್ಯದ ಧೋರಣೆ ವಿಶಿಷ್ಟವಾಗಿತ್ತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ 'ಚಿಕವೀರರಾಜೇಂದ್ರ' ಕಾದಂಬರಿಯನ್ನು ಇಂಗ್ಲಿಷ್‌ಗೆ ಶರ್ಮ ಅನುವಾದಿಸಿದ್ದರು. ಈ ಶತಮಾನದ ನೂರು ಇಂಗ್ಲಿಷ್ ಕವನಗಳು ಹಾಗೂ ಹಲವು ಕಥೆಗಳನ್ನು ಅವರು ಕನ್ನಡಕ್ಕೆ ...
READ MORE